More

    PHOTOS| ಅತಿದೊಡ್ಡ ಮ್ಯೂಸಿಕ್​ ಅವಾರ್ಡ್ಸ್​ ನೈಟ್​ ಕಾರ್ಯಕ್ರಮದಲ್ಲಿ ಪತಿಯೊಂದಿಗೆ ಬೋಲ್ಡ್​ ಆಗಿ ಕಾಣಿಸಿಕೊಂಡ ಪಿಗ್ಗಿ!

    ನವದೆಹಲಿ: ಸ್ಟಾರ್​ ದಂಪತಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್​ ಜೋನಾಸ್​ ತಮ್ಮ ವಿಭಿನ್ನ ವೇಷಭೂಷಣದಿಂದಲೇ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಅಮೆರಿಕದ ಲಾಸ್​ ಏಂಜಲಿಸ್​ನಲ್ಲಿ ನಿನ್ನೆ ರಾತ್ರಿ ನಡೆದ 62ನೇ ಆವೃತ್ತಿಯ ಅತಿದೊಡ್ಡ ಮ್ಯೂಸಿಕ್​ ಅವಾರ್ಡ್ಸ್​ ನೈಟ್​ ಗ್ರ್ಯಾಮಿ​ 2020 ಕಾರ್ಯಕ್ರಮದಲ್ಲಿ ಪಿಗ್ಗಿ ಮತ್ತು ನಿಕ್​ ಎಂಟ್ರಿ ಎಲ್ಲರನೊಮ್ಮೆ ತಿರುಗು ನೋಡುವಂತೆ ಮಾಡಿದೆ.

    ಎಂದಿನಂತೆ ಕಾರ್ಯಕ್ರಮಕ್ಕೆ ಆಗಮಿಸುವಾಗ ರೆಡ್​ ಕಾರ್ಪೆಟ್​ ಮೇಲೆ ನಿಂತು ಕ್ಯಾಮರಾಗೆ ಸ್ಟಾರ್ ದಂಪತಿ ಪೋಸ್​ ನೀಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಪಿಗ್ಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದು, 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ಜಾಲತಾಣದಲ್ಲಿಯೂ ವೈರಲ್​ ಆಗಿದೆ.

    ಕುತ್ತಿಗೆಯಿಂದ ಹೊಟ್ಟೆಯವರೆಗೂ ತೆರೆದಿರುವ ಮತ್ತು ಅರ್ಧ ಎದೆಯನ್ನು ತೋರುವ ಉದ್ದವಾದ ಗೌನ್​ ಧರಿಸಿ ಪಿಗ್ಗಿ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ನಿಕ್​ ಕೂಡ ಗೋಲ್ಡ್​ ಬಣ್ಣದ ಸೂಟ್​ ಧರಿಸಿ ಮಿಂಚಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts