More

    ಗ್ರಾಮೀಣ ಪತ್ರಕರ್ತರಿಗೂ ಸೌಲಭ್ಯ ಸಿಗಲಿ: ಶಾಸಕ ಕೆ.ನೇಮಿರಾಜ ನಾಯ್ಕ ಆಶಯ

    ಹಗರಿಬೊಮ್ಮನಹಳ್ಳ: ಸಾಮಾಜಿಕ ಸ್ವಾಸ್ಥ್ಯ ಬಯಸುವ ನಿಸ್ವಾರ್ಥರೆಂದರೆ ಪತ್ರಕರ್ತರು. ಅವರಿಗೆ ಆರ್ಥಿಕ ನೆರವು ನೀಡಲು ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬುದ್ಧ, ಬಸವ, ಅಂಬೇಡ್ಕರ್ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

    ಪತ್ರಕರ್ತರ ಬದುಕು-ಬವಣೆಯನ್ನು ನಾನು ಸೂಕ್ಷ್ಮವಾಗಿ ಅರಿತಿದ್ದೇನೆ. ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಮರಿಯಮ್ಮನಹಳ್ಳಿಯಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಿಸಲು ಕ್ರಮವಹಿಸಲಾಗುವುದು. ಪತ್ರಕರ್ತರಿಗೆ ನಿವೇಶನ ಗುರುತಿಸಿ ಮನೆ ನಿರ್ಮಿಸಿಕೊಡಲಾಗುವುದು. ಸರ್ಕಾರ ರಾಜ್ಯಮಟ್ಟದ, ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಮಾತ್ರ ಕೆಲವು ಸವಲತ್ತುಗಳನ್ನು ನೀಡುತ್ತಿದೆ. ಇಂತಹ ತಾರತಮ್ಯ ಎಸಗದೇ ತಾಲೂಕು, ಗ್ರಾಮೀಣ ಪತ್ರಕರ್ತರಿಗೂ ವಿಸ್ತರಿಸಬೇಕಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಜವಾಬ್ದಾರಿಗಳನ್ನು ಜಾಗೃತಿಗೊಳಿಸುವ ಕಾರ್ಯ ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದರು.

    ಇದನ್ನೂ ಓದಿ: ಹಿರಿಯ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಗೌರವ; ಪತ್ರಕರ್ತರು ಉತ್ಪ್ರೇಕ್ಷೆ ಸುದ್ದಿ ಮಾಡುವುದನ್ನು ಬಿಡಿ: ದೇವನಾಥ್​​​​

    ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ವೃತ್ತಿಪರತೆ ಅಳವಡಿಸಿಕೊಂಡರೆ ಪತ್ರಕರ್ತರಿಗೆ ತುಂಬಾ ಮೌಲ್ಯ ಸಿಗಲಿದೆ ಎಂದರು. ಪ್ರಾಚಾರ್ಯ ಕೆ.ವೆಂಕಟೇಶ್ ಉಪನ್ಯಾಸ ನೀಡಿದರು. ತಾಪಂ ಇಒ ಜಿ.ಪರಮೇಶ್ವರ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಜಿಲ್ಲಾ ಉಪಾಧ್ಯಕ್ಷರಾದ ಬುಡ್ಡಿ ಬಸವರಾಜ, ಕಿಚಿಡಿ ಕೊಟ್ರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವೆಂಕೋಬ, ತಾಲೂಕು ಘಟಕದ ಅಧ್ಯಕ್ಷ ಉಮಾಪತಿ ಶೆಟ್ಟರ್, ತಾಲೂಕು ಪದಾಧಿಕಾರಿಗಳಾದ ಉಮೇಶ್ ನೆಲ್ಕುದ್ರಿ, ಸಿ.ಶಿವಾನಂದ, ವಿಶ್ವನಾಥ ಭಾವಿಕಟ್ಟಿ, ರಾಜಾವಲಿ, ಡಿ.ಭೀಮರಾಜ್, ಮಂಜುನಾಥ ಪಟ್ಟಣಶೆಟ್ಟಿ, ವೀರೇಶ ಮಜ್ಗಿ, ಅಕ್ಕಂಡಿ ಬಸವರಾಜ, ಬಿ.ಕೆ.ಬಸವರಾಜ ಇದ್ದರು. ಅಶೋಕ ಉಪ್ಪಾರ, ಜೆ.ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts