More

    ವಿಜಯಪುರದ ಇಂಡಿ ಪಟ್ಟಣದ ಮತ ಎಣಿಕೆ‌ ಕೇಂದ್ರದಲ್ಲಿ ನೂಕು ನುಗ್ಗಲು

    ವಿಜಯಪುರ : ಜಿಲ್ಲೆಯಲ್ಲಿ ಒಟ್ಟು 12 ಮತ ಎಣಿಕೆ ಕೇಂದ್ರಗಳಿದ್ದು, ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿದ್ದು, ಪ್ರತಿ ಗ್ರಾಪಂನ ಮತ ಎಣಿಕೆ 3 ರಿಂದ 4 ಸುತ್ತುಗಳಲ್ಲಿ ನಡೆಯಲಿದೆ. ಮತ ಎಣಿಕೆಗಾಗಿ 441 ಮತ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. 481 ಮತ ಎಣಿಕೆ ಮೇಲ್ವಿಚಾರಕರು, 966 ಮತ ಎಣಿಕೆ ಸಹಾಯಕರು (ಕಾಯ್ದಿರಿಸಿದವರನ್ನು ಒಳಗೊಂಡಂತೆ) ನ್ನು ನೇಮಿಸಲಾಗಿದೆ.

    ಗೊಂದಲದ ಗೂಡಾಯ್ತು

    ಗ್ರಾಪಂ ಚುನಾವಣೆ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಆರಂಭಕ್ಕೆ ಮೊದಲೇ ನೂಕು ನುಗ್ಗಲು ಉಂಟಾಯಿತು. ಇಂಡಿ ಪಟ್ಟಣದ ಆದರ್ಶ ಶಾಲೆಯಲ್ಲಿ ತೆರೆಯಲಾದ ಮತ ಎಣಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಮಾಯವಾಯಿತು. ಕರೊನಾ ಮಹಾಮಾರಿ ಲೆಕ್ಕಿಸದೇ ಮಾಸ್ಕ್ ಸಹ ಇಲ್ಲದೇ ಏಜೆಂಟರು ಕೇಂದ್ರದೊಳಕ್ಕೆ ನುಗ್ಗಿದರು.  ಬೆಳಗಿನ ಆರು ಗಂಟೆಯಿಂದಲೇ ಏಜೆಂಟ್ ರು ಮತ ಎಣಿಕೆ ಕೇಂದ್ರದ ಎದುರು ಸಾಲು ಗಟ್ಟಿ ನಿಂತಿದ್ದರು. ಕಿಮೀ ಅಂತರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂಜಾಗೃತ ಕ್ರಮವಾಗಿ ಸಾಕಷ್ಟು ತಪಾಸಣೆಗೊಳಪಡಿಸಿದರೂ ಕೆಲವರು ಗುಟ್ಕಾ, ತಂಬಾಕು ಚೀಟಿ ಒಳಗೊಯ್ದರು. ಮತ ಎಣಿಕೆ ಕೇಂದ್ರದೊಳಗೆ ಬಿಡಲು ಸರಿಯಾದ ಕ್ರಮ ಕೈಗೊಳ್ಳದ ಕಾರಣ ಏಜೆಂಟರು ಮುಖ್ಯ ದ್ವಾರದ ಸುತ್ತ ಜಮಾಯಿಸಿದ್ದರಿಂದ ನೂಕು ನುಗ್ಗಲು ಏರ್ಪಟ್ಟಿತು.

    ವಿಜಯಪುರ ಜಿಲ್ಲೆಯ 12 ತಾಲೂಕುಗಳ 199 ಗ್ರಾಪಂಗಳಿಗೆ ಚುನಾವಣೆಯಾಗಿದ್ದು, ಒಟ್ಟು 9247 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಣಯವಾಗುತ್ತಿದೆ. ಮೊದಲ ಹಂತದಲ್ಲಿ 250 ಅವಿರೋಧ ಆಯ್ಕೆಯಾಗಿದ್ದು ಎರಡನೇ ಹಂತದಲ್ಲಿ 119, ಒಟ್ಟು ಅವಿರೋಧ ಆಯ್ಕೆ ಕಂಡಿದ್ದಾರೆ. ಒಟ್ಟು 369 ಅಭ್ಯರ್ಥಿಗಳ ಅವಿರೋಧ ಆಯ್ಕೆ ಆಗಿದೆ. ಡಿ. 22 ಹಾಗೂ 27 ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು ಶೇ.80.62 ರಷ್ಟು ಮತದಾನವಾಗಿದೆ.

    ಮೊದಲ ಹಂತದ ವಿವರ : ಮೊದಲ ಹಂತದಲ್ಲಿ ವಿಜಯಪುರ, ಬಬಲೇಶ್ವರ, ತಿಕೋಟಾ, ನಿಡಗುಂದಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟಿ, ಕೊಲ್ಹಾರ ಸೇರಿ 8 ತಾಲೂಕಿನ 111 ಗ್ರಾಪಂಗಳಿಗೆ ಚುನಾವಣೆ ನಡೆದಿದೆ. ಮತ ಎಣಿಕೆಗಾಗಿ 251 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, (ಕಾಯ್ದಿರಿಸಿದ ಒಳಗೊಂಡಂತೆ) 273 ಮತ ಎಣಿಕೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. (ಕಾಯ್ದಿರಿಸಿದ ಒಳಗೊಂಡಂತೆ) 549 ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಅಂತಿಮವಾಗಿ 4997 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮತ ಎಣಿಕೆಗಾಗಿ 8 ಕೇಂದ್ರಗಳನ್ನು ತೆರೆಯಲಾಗಿದೆ.

    ಇದನ್ನೂ ಓದಿ: ನಿತ್ಯಭವಿಷ್ಯ|ಈ ರಾಶಿಯವರು ಬಹುದಿನಗಳಿಂದ ನಿರೀಕ್ಷಿಸಿದ ಕಾರ್ಯವೊಂದು ಇಂದು ಸಫಲವಾಗಲಿದೆ..

    ಎರಡನೇ ಹಂತದ ಎಣಿಕೆ : ಎರಡನೆ ಹಂತದ ಚುನಾವಣೆ ಅಂಗವಾಗಿ 4 ತಾಲೂಕುಗಳಾದ ಇಂಡಿ, ಚಡಚಣ, ಸಿಂದಗಿ, ದೇವರ ಹಿಪ್ಪರಗಿಯ 88 ಗ್ರಾಪಂಗಳಿಗೆ ಚುನಾವಣೆ ನಡೆದಿದೆ. 6 ಗ್ರಾಪಂಗಳಿಗೆ ಚುನಾವಣೆ ನಡೆದಿಲ್ಲ. ಮತ ಎಣಿಕೆಗಾಗಿ 190 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, (ಕಾಯ್ದಿರಿಸಿದ ಒಳಗೊಂಡಂತೆ) 208 ಮೇಲ್ವಿಚಾರಕರನ್ನು ನೇಮಿಸಲಾಗಿದೆ. (ಕಾಯ್ದಿರಿಸಿದ ಒಳಗೊಂಡಂತೆ) 417 ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಎರಡನೆ ಹಂತದಲ್ಲಿ ಅಂತಿಮವಾಗಿ 4250 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮತ ಎಣಿಕೆಗಾಗಿ 4 ಕೇಂದ್ರಗಳನ್ನು ತೆರೆಯಲಾಗಿದೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಪಂಚಾಯಿತಿ ಕುತೂಹಲಕ್ಕೆ ಇಂದು ತೆರೆ – ಗ್ರಾ.ಪಂ. ಚುನಾವಣೆಯ ಮತಗಳ ಎಣಿಕೆ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts