More

    ಮುಜುಗರ ಉಂಟು ಮಾಡುತ್ತಿವೆ ಕೆಲ ಚಿಹ್ನೆ

    ರೋಣ: ನನ್ನ ಗುರುತು ಬೂಟು, ಅದಕ್ಕೆ ಮತ ನೀಡಿ. ನನ್ನ ಚಿಹ್ನೆ ಕತ್ತರಿ, ಅದಕ್ಕೆ ಕೈಜೋಡಿಸಿ. ನನ್ನದು ಬಕೆಟ್, ಅದನ್ನು ಬೆಂಬಲಿಸಿ. ನನ್ನ ಗುರುತು ಚಪ್ಪಲಿಗೆ ಮತ ನೀಡಿ…

    ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸಿಗುವ ಕೆಲವು ಚಿಹ್ನೆಗಳು ಅವರು ಮತ ಕೇಳುವ ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗುತ್ತಿರುವ ಕುರಿತು ಗ್ರಾಮಗಳಲ್ಲಿ ಚರ್ಚೆ ನಡೆದಿದೆ. ಚುನಾವಣೆ ಆಯೋಗವು ಕರ್ನಾಟಕ ಕೋಷ್ಟಕ 4ರ ಮುಕ್ತ ಚಿಹ್ನೆಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಬೂಟು, ಜೋಡು ಚಪ್ಪಲಿ, ಕತ್ತರಿ, ಟೋಪಿ ಮೊದಲಾದಗಳನ್ನು ಪ್ರಕಟಿಸಿದೆ. ಇಂಥ ಕೆಲವು ಚಿಹ್ನೆಗಳು ಸಿಕ್ಕಲ್ಲಿ ಮತದಾರರ ಬಳಿಗೆ ಹೋಗಿ ಅದನ್ನು ತಿಳಿಸಿ ಮತ ಯಾಚಿಸಬೇಕಾದ ಅನಿವಾರ್ಯತೆ ಅಭ್ಯರ್ಥಿಗಳದ್ದಾಗಿದೆ.

    ಚಪ್ಪಲಿ, ಕತ್ತರಿ, ಟೋಪಿ ಚಿಹ್ನೆಗಳನ್ನು ಬಳಸಿ ಎದುರಾಳಿಗಳಿಗೆ ನೋವನ್ನುಂಟು ಮಾಡುವ ಸಾಧ್ಯತೆಯೂ ಇದೆ. ಇಂತಹ ಚಿಹ್ನೆಗಳನ್ನು ರದ್ದುಪಡಿಸಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಪವಿತ್ರವಾಗಿರುವ ತಮ್ಮ ಮತವನ್ನು ಚಪ್ಪಲಿ, ಬೂಟು, ಲಂಗದಂತಹ ಗುರುತಿನ ಮೇಲೆ ಮುದ್ರೆ ಒತ್ತಲು ಮತದಾರರು ಹಿಂದೆ-ಮುಂದೆ ನೋಡುತ್ತಾರೆ. ಚುನಾವಣೆ ಆಯೋಗ ಇಂತಹ ಚಿಹ್ನೆಗಳನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರೈತ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಲೀಲಾ ಚಿತ್ರಗಾರ ಒತ್ತಾಯಿಸಿದ್ದಾರೆ.

    ಗ್ರಾಮೀಣ ಭಾಗದಲ್ಲಿ ನಮ್ಮನ್ನಾಳುವವರು ಮೌಢ್ಯಕ್ಕೆ ಬಲಿಯಾಗಬಾರದು. ನಾವು ಮಾಡುವ ಜನಪರ ಕೆಲಸಗಳು, ಜನರೊಂದಿಗಿನ ಒಡನಾಟ ನಮಗೆ ಮತವಾಗಿ ಪರಿವರ್ತನೆಯಾಗುತ್ತವೆ ವಿನಃ ಚಿಹ್ನೆಗಳಿಂದಲ್ಲ. ಚಮ್ಮಾರರು ಚಪ್ಪಲಿಯನ್ನು, ಸಿಂಪಿಗೇರು ಕತ್ತರಿಯನ್ನು ಪೂಜಿಸಿ ಕಾಯಕ ಮಾಡಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಈ ಚಿಹ್ನೆಗಳು ಶುಭ ಸೂಚಕವಾಗಿವೆ.
    | ಮಂಜುನಾಥ ಹಾಳಕೇರಿ, ದಲಿತ ಸಂಘಟನೆ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts