More

    ಮತಗಟ್ಟೆಯ ಬಳಿ ಕುಂಕುಮ, ಹೂವು, ಲಿಂಬೆಹಣ್ಣು! ವಾಮಾಚಾರವಾಗಿದೆಯೆಂದು ದೂರು

    ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಪಂ ಭಾಗ-2ಕ್ಕೆ ಮತದಾನ ನಡೆದ ಮತಗಟ್ಟೆಯಲ್ಲಿ ವಾಮಾಚಾರ ನಡೆಸಿದ ಕುರುಹುಗಳು ದೊರೆತಿದ್ದು ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಎದುರಾಳಿಗಳನ್ನು ಭಯಪಡಿಸಲು ವಾಮಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್​ಎಸ್.ಬಿ.ಶ್ರೀಪಾಸ್ ಅವರಿಗೆ ಇದೇ ಕ್ಷೇತ್ರದ ಅಭ್ಯರ್ಥಿಗಳಾದ ಮುತ್ತುಗುಂಡಿ ಆದರ್ಶ, ಅಣ್ಣಪ್ಪ ಹಾಗೂ ದೇವರಾಜ್ ಎಂಬುವವರು ದೂರು ನೀಡಿದ್ದಾರೆ.

    ಇದನ್ನೂ ಓದಿ: ಮದುವೆಯಾಗಿ 3 ವರ್ಷವಾದರೂ ಹೆಂಡತಿ ಗರ್ಭವತಿ ಆಗಲಿಲ್ಲವೆಂದೇ ಬೇಸರಗೊಂಡ ಗಂಡ ಹೀಗಾ ಮಾಡೋದು?!

    ಮತಗಟ್ಟೆ ಬಾಗಿಲಿನ ಬಳಿ ಕುಂಕುಮ, ಹೂವು ಮತ್ತು ಲಿಂಬೆಹಣ್ಣು ಇಟ್ಟಿದ್ದ ಕಾಗದದ ಪೊಟ್ಟಣ ದೊರೆತಿದೆ. ಇದರೊಂದಿಗೆ ಅನಾನಸ್, ಆಟೋರಿಕ್ಷಾ ಹಾಗೂ ಟೆಲಿಫೋನ್ ಚಿಹ್ನೆ ಇರುವ ಕರಪತ್ರವೂ ಇತ್ತು. ಈ ಕ್ಷೇತ್ರದಿಂದ ಆಟೋರಿಕ್ಷಾ ಚಿಹ್ನೆಯಡಿ ಸ್ಪರ್ಧಿಸಿರá-ವ ಅಭ್ಯರ್ಥಿ ಯು.ಡಿ.ವೆಂಕಟೇಶ್ ವಾಮಾಚಾರ ಮಾಡಿದ್ದಾರೆ. ಸದರಿ ಅಭ್ಯರ್ಥಿ ಕಾನೂನು ಮೀರಿ ಮತದಾನದ ಹಿಂದಿನ ದಿನದ ರಾತ್ರಿ ಮತದಾನ ಕೇಂದ್ರವನ್ನು ಪ್ರವೇಶಿಸಿದ್ದಾರೆ. ತನ್ನ ಎದುರಾಳಿಗಳನ್ನು ವಾಮಾಚಾರದ ಮೂಲಕ ಭಯಪಡಿಸಲು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಅಜ್ಜಿ ತಲೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಂದ ಮೊಮ್ಮಗ! ಕಾರಣವೇನು ಗೊತ್ತಾ?

    ಸದರಿ ಅಭ್ಯರ್ಥಿ ಹಾಗೂ ವಾಮಾಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಪಿಡಿಒ, ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ವಿರುದ್ದವೂ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

    ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts