More

    ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​​ಗೆ ಶುರುವಾಯ್ತು ಟೆನ್ಷನ್​!

    ಬೆಂಗಳೂರು: ರಾಜ್ಯಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್​ಗೆ ಆಪರೇಷನ್ ಭಯ ಕಾಡುತ್ತಿದೆ.

    ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬಿಜೆಪಿ ಗಾಳ ಹಾಕುತ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇದು ಕೆಪಿಸಿಸಿಗೆ ಸತ್ವ ಪರೀಕ್ಷೆ ಕಾಲ ಅಂತ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿರಿ ಭೀಕರ ಅಪಘಾತಕ್ಕೆ ಬೆಚ್ಚಿದ ಜನ: ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

    ‘ಕೆಪಿಸಿಸಿಗೆ ಇದು ಸತ್ವ ಪರೀಕ್ಷೆಯ ಕಾಲ. ಮತದಾರರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ ಹಲವೆಡೆ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ದೂರುಗಳಿವೆ. ಇಂತಹ ಕೃತ್ಯಗಳು ಖಂಡನೀಯ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ‘ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಗ್ರಾಮೀಣ ಪ್ರದೇಶದ ಮತದಾರರು ಕಾಂಗ್ರೆಸ್​ ಅನ್ನು ಎಂದೂ ಕೈ ಬಿಟ್ಟಿಲ್ಲ. ರೈತಪರ, ಬಡವರ ಪರ ಮತ್ತು ಗ್ರಾಮ ಭಾರತದ ಪರವಾಗಿರುವ ಕಾಂಗ್ರೆಸ್ ನೀತಿ ಮತ್ತು ಕಾರ್ಯಕ್ರಮಗಳೇ ಇದಕ್ಕೆ ಕಾರಣ. ಗೆಲುವಿನ ಪರಂಪರೆ ಈ ಬಾರಿಯೂ ಮುಂದುವರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ‘ಭಾರತೀಯ ಜನತಾ ಪಕ್ಷದ ರೈತ ವಿರೋಧಿ ಮತ್ತು ಬಡವರ ವಿರೋಧಿ ನೀತಿಯಿಂದ ರೋಸಿಹೋದ ಗ್ರಾಮೀಣ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

    ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲುವು

    ಗ್ರಾಪಂ ಚುನಾವಣೆಯಲ್ಲಿ ಗೆದ್ದರೂ ಸಂಭ್ರಮಿಸಲು ಅಭ್ಯರ್ಥಿಯೇ ಬದುಕಿಲ್ಲ!

    ಗ್ರಾಪಂ ಚುನಾವಣೆಯಲ್ಲಿ ಗೆದ್ದರೂ ಸಂಭ್ರಮಿಸಲು ಅಭ್ಯರ್ಥಿಯೇ ಬದುಕಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts