More

    ಕಾಲೇಜು ಆರಂಭಕ್ಕೆ ನೀರಸ ಪ್ರತಿಕ್ರಿಯೆ

    ಶಿವಮೊಗ್ಗ: ಪದವಿ ಕಾಲೇಜು ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯಲ್ಲಿ 8 ತಿಂಗಳ ಬಳಿಕ ಕಾಲೇಜು ಮರು ಆರಂಭವಾದವು. ಪ್ರಾಧ್ಯಾಪಕರು ಎಲ್ಲ ಸಿದ್ಧತೆ ಮಾಡಿಕೊಂಡು ವಿದ್ಯಾರ್ಥಿಗಳ ಆಗಮನಕ್ಕೆ ಕಾಯá-ತ್ತಿದ್ದರು. ಆದರೆ ಮೊದಲ ದಿನವೇ ಬಹá-ತೇಕ ಕಾಲೇಜá-ಗಳಲ್ಲಿ ವಿದ್ಯಾರ್ಥಿಗಳು ಬಾರದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

    ಜಿಲ್ಲೆಯ 16 ಸರ್ಕಾರಿ ಹಾಗೂ 14 ಅನುದಾನಿತ ಪದವಿ ಕಾಲೇಜುಗಳಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಸುಮಾರು 6,200 ವಿದ್ಯಾರ್ಥಿಗಳ ಪೈಕಿ ಮೊದಲ ದಿನ ಕಾಲೇಜಿಗೆ ಬಂದಿದ್ದು 400 ವಿದ್ಯಾರ್ಥಿಗಳು ಮಾತ್ರ. ಕೆಲವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿಯನ್ನೂ ತಲುಪಲಿಲ್ಲ. ಇನ್ನು ಕೆಲವೆಡೆ ಮಧ್ಯಾಹ್ನದವರೆಗೂ ಕಾಲೇಜುಗಳನ್ನು ತೆರೆದ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುವಂತಾಯಿತು.

    ಶಿಕಾರಿಪುರದಲ್ಲಿ 60 ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರೆ, ಭದ್ರಾವತಿಯ ಎರಡು ಕಾಲೇಜಿಗಳಲ್ಲಿ 98 ವಿದ್ಯಾರ್ಥಿಗಳಿದ್ದರು. ಸೊರಬದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಒಬ್ಬರೂ ಕಾಲೇಜಿನತ್ತ ಸುಳಿಯಲಿಲ್ಲ. ಆನವಟ್ಟಿಯಲ್ಲಿ 15 ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. ತೀರ್ಥಹಳ್ಳಿಯ ಮೂರು ಕಾಲೇಜುಗಳಲ್ಲಿ ಶೂನ್ಯ ಹಾಜರಾತಿಯಿತ್ತು.

    ಕರೊನಾ ನಿರ್ವಹಣೆ ಬಗ್ಗೆ ಸರ್ಕಾರ ರೂಪಿಸಿದ ಕಠಿಣ ಮಾರ್ಗಸೂಚಿಗಳನ್ನು ಕಾಲೇಜುಗಳಲ್ಲಿ ಪಾಲನೆ ಮಾಡಿದರೂ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಇನ್ನೊಂದೆಡೆ ಕಾಲೇಜಿಗೆ ಆಗಮಿಸುವ ಮುನ್ನ ಕರೊನಾ ಪರೀಕ್ಷೆಗೆ ಒಳಪಟ್ಟು ವರದಿ ನೆಗೆಟಿವ್ ಇರá-ವುದನ್ನು ವಿದ್ಯಾರ್ಥಿ ದೃಢಪಡಿಸಿಕೊಳ್ಳಬೇಕು. ಈ ಬಗ್ಗೆ ವರದಿಯನ್ನೂ ಹೊಂದಿರಬೇಕೆಂಬ ಷರತ್ತು ಬಹುತೇಕ ವಿದ್ಯಾರ್ಥಿಗಳ ನಿರಾಸಕ್ತಿಗೆ ಕಾರಣ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts