ಧಾರವಾಡ: ತಾಲೂಕಿನ 35 ಗ್ರಾ.ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ನೂತನ ಸದಸ್ಯರ ಸಮ್ಮುಖದಲ್ಲಿ ಮಂಗಳವಾರ ನಿಗದಿ ಮಾಡಲಾಯಿತು.
ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆ ಜರುಗಿಸಿದರು. 1993ರಿಂದ 2020ರವರೆಗಿನ ಮೀಸಲಾತಿ ಪರಿಶೀಲಿಸಿ
ಎನ್ಐಸಿ (ನ್ಯಾಷನಲ್ ಇನ್ಫಾರ್ವೆಟಿಕ್ಸ್ ಸೆಂಟರ್) ಯಲ್ಲಿ ಅಳವಡಿಸಲಾಗಿತ್ತು. ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಪುನರಾವರ್ತನೆಯಾಗದಂತೆ ಪ್ರಕಟಿಸಲಾಯಿತು. ಆರಂಭದಲ್ಲಿ ಅಧ್ಯಕ್ಷರ, ನಂತರ ಉಪಾಧ್ಯಕ್ಷರ ಮೀಸಲಾತಿ ಘೋಷಿಸಲಾಯಿತು.
ತಾಲೂಕಿನ 35ರ ಪೈಕಿ 3 ಪಂಚಾಯಿತಿಗಳ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ (ಎಸ್ಸಿ) ಮೀಸಲಾತಿ ಪ್ರಕಟಿಸಬೇಕಾಗಿತ್ತು. ಹಿಂದಿನ ಮೀಸಲಾತಿ ಪರಿಗಣಿಸಿದಾಗ 7 ಪಂಚಾಯಿತಿಗಳು ಎಸ್ಸಿ ಮೀಸಲಾತಿಗೆ ಅರ್ಹವಾಗಿದ್ದವು. ಈ 7 ಪಂಚಾಯಿತಿಗಳಾದ ಮಾರಡಗಿ, ಮರೇವಾಡ, ಕುರುಬಗಟ್ಟಿ, ಚಿಕ್ಕಮಲ್ಲಿಗವಾಡ, ಕಲಕೇರಿ, ದೇವರಹುಬ್ಬಳ್ಳಿ, ಮನಸೂರ ಪಂಚಾಯಿತಿ ಪೈಕಿ ಮೂರನ್ನು ಆರಿಸಲು ಚೀಟಿ ಹಾಕಿ ಲಾಟರಿ ಎತ್ತಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಬೇರೆ ಪಂಚಾಯಿತಿಗಳ ನೂತನ ಸದಸ್ಯರು ಲಾಟರಿ ಎತ್ತಿದಾಗ ದೇವರಹುಬ್ಬಳ್ಳಿ, ಮಾರಡಗಿಗೆ ಎಸ್ಸಿ (ಮಹಿಳೆ) ಹಾಗೂ ಚಿಕ್ಕಮಲ್ಲಿಗವಾಡಕ್ಕೆ ಎಸ್ಸಿ ಮೀಸಲಾತಿ ಬಂತು.
ಇದೇ ರೀತಿ 2 ಪಂಚಾಯಿತಿಗಳಿಗೆ ಅನುಸೂಚಿತ ವರ್ಗ (ಎಸ್ಟಿ) ಮೀಸಲಾತಿ ನಿಗದಿಪಡಿಸಲು 18 ಪಂಚಾಯಿತಿಗಳು ಅರ್ಹವಾಗಿದ್ದವು. ಇಲ್ಲಿಯೂ ಲಾಟರಿ ಎತ್ತಿದಾಗ ಕೋಟೂರ ಎಸ್ಟಿ (ಮಹಿಳೆ), ಹಾರೋಬೆಳವಡಿಗೆ ಎಸ್ಟಿ ಮೀಸಲಾತಿ ಬಂದಿತು.
ಜಿ.ಪಂ. ಸಿಇಒ ಡಾ. ಬಿ. ಸುಶೀಲಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ, ತಾ.ಪಂ. ಇಒ ಎಸ್.ಎಸ್. ಕಾದ್ರೊಳ್ಳಿ ಇತರರಿದ್ದರು.
ಮನಗುಂಡಿ: ಅ ವರ್ಗ (ಅಧ್ಯಕ್ಷ); ಸಾಮಾನ್ಯ ಮಹಿಳೆ (ಉಪಾಧ್ಯಕ್ಷ).
ಮನಸೂರ: ಅ ವರ್ಗ ಎಸ್ಟಿ ಮಹಿಳೆ.
ಮಂಡಿಹಾಳ: ಅ ವರ್ಗ; ಸಾ. ಮಹಿಳೆ.
ತೇಗೂರ: ಅ ವರ್ಗ; ಸಾ. ಮಹಿಳೆ.
ಮುಮ್ಮಿಗಟ್ಟಿ: ಅ ವರ್ಗ; ಎಸ್ಸಿ ಮಹಿಳೆ.
ಮಾದನಭಾವಿ: ಅ ವರ್ಗ; ಮಹಿಳೆ-ಬ ವರ್ಗ ಮಹಿಳೆ.
ತಡಕೋಡ: ಅ ವರ್ಗ ಮಹಿಳೆ; ಸಾಮಾನ್ಯ.
ನರೇಂದ್ರ: ಅ ವರ್ಗ ಮಹಿಳೆ; ಸಾಮಾನ್ಯ.
ಮರೇವಾಡ: ಅ ವರ್ಗ ಮಹಿಳೆ; ಸಾಮಾನ್ಯ ಮಹಿಳೆ.
ಕನಕೂರ: ಅ ವರ್ಗ ಮಹಿಳೆ; ಸಾಮಾನ್ಯ.
ಕ್ಯಾರಕೊಪ್ಪ: ಬ ವರ್ಗ; ಸಾಮಾನ್ಯ ಮಹಿಳೆ.
ಕುರುಬಗಟ್ಟಿ: ಬ ವರ್ಗ ಮಹಿಳೆ; ಸಾಮಾನ್ಯ.
ಯರಿಕೊಪ್ಪ: ಸಾಮಾನ್ಯ; ಅ ವರ್ಗ ಮಹಿಳೆ.
ನಿಗದಿ: ಸಾಮಾನ್ಯ; ಸಾಮಾನ್ಯ ಮಹಿಳೆ.
ಕಲಕೇರಿ: ಸಾಮಾನ್ಯ; ಸಾಮಾನ್ಯ ಮಹಿಳೆ.
ರಾಮಾಪುರ: ಸಾಮಾನ್ಯ; ಎಸ್ಸಿ ಮಹಿಳೆ.
ಹಂಗರಕಿ: ಸಾಮಾನ್ಯ; ಅ ವರ್ಗ ಮಹಿಳೆ.
ಕೊಟಬಾಗಿ: ಸಾಮಾನ್ಯ; ಅ ವರ್ಗ ಮಹಿಳೆ.
ಪುಡಕಲಕಟ್ಟಿ: ಸಾಮಾನ್ಯ; ಸಾ. ಮಹಿಳೆ.
ಅಮ್ಮಿನಭಾವಿ: ಸಾಮಾನ್ಯ; ಅ ವರ್ಗ ಮಹಿಳೆ.
ಶಿವಳ್ಳಿ: ಸಾಮಾನ್ಯ; ಸಾಮಾನ್ಯ ಮಹಿಳೆ.
ಮುಗದ: ಸಾಮಾನ್ಯ. ಮಹಿಳೆ; ಸಾಮಾನ್ಯ.
ಹಳ್ಳಿಗೇರಿ: ಸಾಮಾನ್ಯ ಮಹಿಳೆ; ಸಾಮಾನ್ಯ.
ಬೇಲೂರ: ಸಾ. ಮಹಿಳೆ; ಸಾಮಾನ್ಯ.
ಯಾದವಾಡ: ಸಾ. ಮಹಿಳೆ; ಅ ವರ್ಗ.
ಗರಗ: ಸಾಮಾನ್ಯ ಮಹಿಳೆ; ಎಸ್ಟಿ.
ಲೋಕೂರ: ಸಾಮಾನ್ಯ ಮಹಿಳೆ; ಅ ವರ್ಗ ಮಹಿಳೆ.
ಉಪ್ಪಿನಬೆಟಗೇರಿ: ಸಾ. ಮಹಿಳೆ; ಅ ವರ್ಗ.
ಕರಡಿಗುಡ್ಡ: ಸಾಮಾನ್ಯ; ಎಸ್ಸಿ.
ಹೆಬ್ಬಳ್ಳಿ: ಸಾಮಾನ್ಯ ಮಹಿಳೆ; ಅ ವರ್ಗ.
ಚಿಕ್ಕಮಲ್ಲಿಗವಾಡ: ಎಸ್ಸಿ; ಅ ವರ್ಗ ಮಹಿಳೆ.
ದೇವರಹುಬ್ಬಳ್ಳಿ: ಎಸ್ಸಿ ಮಹಿಳೆ; ಸಾಮಾನ್ಯ.
ಮಾರಡಗಿ: ಎಸ್ಸಿ ಮಹಿಳೆ; ಸಾಮಾನ್ಯ.
ಹಾರೋಬೆಳವಡಿ: ಎಸ್ಟಿ; ಅ ವರ್ಗ.
ಕೋಟೂರ: ಎಸ್ಟಿ ಮಹಿಳೆ; ಬ ವರ್ಗ.