More

    ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆ, ಶೈಕ್ಷಣಿಕ ಚಟುವಟಿಕೆ ಆದ್ಯತೆ: ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿಕೆ

    ಮಂಡ್ಯ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆ ಮತ್ತು ಶೈಕ್ಷಣಿಕ ಚಟುವಳಿಕೆಗಳಿಗೆ ಹೆಚ್ಚು ಆಧ್ಯತೆ ನೀಡಲಾಗಿದೆ ಎಂದು ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಪ್ರತಾಪ್‌ಲಿಂಗಯ್ಯ ಎಂದು ಹೇಳಿದರು.
    ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಸರ್ಕಾರಿ ಕಾಲೇಜು ಆಯೋಜಿಸಿದ್ದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್.ಎಸ್.ಎಸ್.ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಮಗ್ರ ಶೈಕ್ಷಣಿಕ ಬೆಳೆವಣಿಗೆ ಮತ್ತು ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆಗಳು ಪಠ್ಯರೀತಿಯಲ್ಲಿವೆ, ವ್ಯಕ್ತಿ ವಿಕಸನ ಮತ್ತು ನಾಯಕತ್ವ ಗುಣ ವೃದ್ಧಿಗೆ ಉತ್ತೇಜನ ನೀಡುತ್ತದೆ, ಕೌಸಲಜ್ಞಾನ ಹೆಚ್ಚಳಕ್ಕೆ  ಮಹತ್ವ ನೀಡಿದೆ ಎಂದು ತಿಳಿಸಿದರು.
    ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮಹಿಳೆಯರಲ್ಲಿ ಅಪೌಷ್ಠಿಕಾಂಶ ಹೆಚ್ಚಾಗುತ್ತಿದೆ. ಇದರಿಂದ ಆರೋಗ್ಯಕರ ಜೀವನ ಸಾಗಿಸಲು ಅಸಾಧ್ಯ, ಆರೋಗ್ಯವಂತ ಮಗು ಪಡೆಯಲು ಸಾಧ್ಯವಿಲ್ಲ, ಆರೋಗ್ಯ ಸಮುದಾಯ ಬೆಳೆವಣಿಗೆಗೆ ಕುಂಟಿತವಾಗುತ್ತದೆ, ರಕ್ತಹೀನತೆಯಿಂದ ವಿದ್ಯಾವಂತ ಮಹಿಳೆಯರು ಬಳಲುತ್ತಿರುವುದು ಸರಿಯಲ್ಲ ಎಂದು ಕಿವಿಮಾತೇಳಿದರು.
    ಪ್ರಾಂಶುಪಾಲ ಡಾ.ಆರ್.ದಶರಥ, ಝಾಸ್ಸಿರಾಣಿ ಲಕ್ಷ್ಮೀಬಾಯಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಕೆ.ಎಂ.ಸುನೀತಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಲತಾ, ಅಧ್ಯಾಪಕ ಸಾಂಸ್ಕೃತಿಕ ಸಂಚಾಲಕಿ ಡಾ. ಎಂ.ಬಿ.ಪ್ರಮೀಳಾ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ವೈ.ಕೆ.ಭಾಗ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts