More

  ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ

  ತಲ್ಲೂರ: ಸರ್ಕಾರಿ ಸೌಲಭ್ಯ ಪಡೆಯಲು ರೈತರು ಕಡ್ಡಾಯವಾಗಿ ಕಷಿ ಇಲಾಖೆಯಲ್ಲಿ ಎ್ಐಡಿ ನೋಂದಣಿ ಮಾಡಿಸಬೇಕು ಎಂದು ಆತ್ಮ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಉಮೇಶ ಯರಗಟ್ಟಿ ಹೇಳಿದರು.

  ಗ್ರಾಮದ ಪಂಚಾಯಿತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಸಂಜೀವಿನಿ ವಾಹನ ಉಪಯೋಗದ ಕುರಿತು ರೈತರಿಗೆ ಮಾಹಿತಿ ನೀಡಿ ಮಾತನಾಡಿದರು. ಬೆಳೆ ಹಾನಿ, ಬೆಳೆ ವಿಮೆ, ಸಹಾಯಧನದಲ್ಲಿ ಬೀಜ ವಿತರಣೆ ಮತ್ತು ಕೃಷಿ ಉಪಕರಣ ಪಡೆದುಕೊಳ್ಳಲು ಎ್ಐಡಿ ಅವಶ್ಯ ಎಂದರು.

  ಕಷಿ ಸಂಜೀವಿನಿ ವಾಹನ ತಾಂತ್ರಿಕ ಸಹಾಯಕ ಶ್ರವಣ ಶಿವಪೂಜಿ ಮಾತನಾಡಿ, ರೈತರು ತಮ್ಮ ಜಮೀನಿನ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಝರಾಕ್ಸ್‌ಗಳನ್ನು ಕಷಿ ಇಲಾಖೆಗೆ ತಂದು ಎ್ಐಡಿ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಬರ ಪರಿಹಾರ ಸಿಗಲು ಸಾಧ್ಯ ಎಂದರು.

  ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮಹಾದೇವ ಶಿವಪೂಜಿ, ಅಕ್ಬರ ಕುದರಿ, ರಾಜಶೇಖರ ಅಣ್ಣಿಗೇರಿ, ಪ್ರಕಾಶ ಮುರಗೋಡ, ಭೀಮಶಿ ಮಡಿವಾಳರ, ನೀಲಕಂಠ ಶಿವಪೂಜಿ, ಈರಪ್ಪ ಕಾಜಗಾರ, ಹುಸೇನಸಾಬ್ ಶಿದ್ನಾಳ, ಭೀಮ ಉಪ್ಪಾರ, ರಮೇಶ ಮಡಿವಾಳರ, ವಿಠ್ಠಲ ಬಡಿಗೇರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts