More

    ಸರ್ಕಾರಿ ಕಾಲೇಜು ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರು

    ಚಿತ್ರದುರ್ಗ : ಯುವ ಶಕ್ತಿಯ ಮೇಲೆ ಅಪಾರ ನಂಬಿಕೆಯಿಟ್ಟಿದ್ದ ಸ್ವಾಮಿ ವಿವೇಕಾನಂದರಲ್ಲಿ ಹತ್ತು ಸದೃಢ ಯುವಕರು ಸಿಕ್ಕರೆ ಜಗತ್ತನ್ನೆ ಬದ ಲಾಯಿಸುವ ದೃಢ ಚಿಂತನೆ ಇತ್ತೆಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ಎಬಿವಿಪಿ ಮಂಗಳ ವಾರ ನಗರದ ಪಂಚಾಚಾರ್ಯಕಲ್ಯಾಣ ಮಂಟಪದ ಮುಂಭಾಗದಿಂದ ಸರ್ಕಾರಿ ಕಲಾ ಕಾಲೇಜಿಗೆ ಹಾದು ಹೋಗುವ ರಸ್ತೆಗೆ ಹಮ್ಮಿ ಕೊಂಡಿದ್ದ ಸ್ವಾಮಿ ವಿವೇಕಾನಂದ ನಾಮಕರಣ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸ್ವಾಮಿ ವಿವೇಕಾನಂದರದು ವಿವೇಕ ಪಥವಾಗಿತ್ತು. ಯುವಕರ ಮನಸ್ಸಿನಲ್ಲಿ ನೂರಾರು ಗೊಂದಲಗಳಿರುತ್ತವೆ. ಎಲ್ಲವನ್ನು ಮೆಟ್ಟಿ ನಿಲ್ಲು ವಂಥವರು ವಿವೇಕ ಪಥದಲ್ಲಿದ್ದಾರೆಂದರ್ಥ. ಜ್ಞಾನ ವಿವೇಚನೆ ಸದುದ್ದೇಶದಿಂದ ಕೂಡಿದ್ದರೆ ಸತ್ಫಲ ಸಿಗುತ್ತದೆ. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸಬೇಕಾಗಿರುವುದೇ ಯುವ ಪೀಳಿಗೆ ಸ್ವಾಮಿ ವಿವೇಕಾನಂದರವರಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದರು.

    ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ,ಚಿಕಾಗೋದಲ್ಲಾದ ಸರ್ವಧರ್ಮ ಸಮ್ಮೇಳನದಿಂದಾಗಿ ಸ್ವಾಮಿ ವಿವೇಕಾನಂದರ ಅಸಾಮಾನ್ಯ ಪ್ರತಿಭೆ ಜಗತ್ತಿಗೆ ಪರಿಚಯವಾಯಿತು ಎಂದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ, ಎಬಿವಿಪಿಯ ಮಂಜುನಾಥ್, ಚಂದ್ರಶೇಖರ್,ಕೃತಿಕಾ,ಜಯಪ್ರಕಾಶ್,ದೀಪಕ್,ವಂದಿತ್‌ರಾಜ್,ಅವಿನಾಶ್,ಪ್ರಮೋದ್,ಅಜಯ್,ಮನು, ಷಣ್ಮುಖ,ಮೇಘನಾ, ಮನೋಜ್,ಛಾಯಾ,ಲಾವಣ್ಯ,ವಂದಿತ,ಶಿವು,ಮುರುಗೇಶ್,ದರ್ಶನ್,ತೇಜಸ್,ಭರತ್,ಭಾನು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts