More

    ದೇಶದ ಜನತೆಗೆ ಮತ್ತೊಂದು ಸಂತಸದ ಸುದ್ದಿ; ಆ ತೈಲದ್ದಾಯ್ತು, ಈಗ ಈ ಎಣ್ಣೆ ಬೆಲೆಯೂ ಇಳಿಕೆ..

    ದೆಹಲಿ: ದೇಶದ ಜನರಿಗೆ ತೈಲ ಬೆಲೆ ಅಂದರೆ ಪೆಟ್ರೋಲ್-ಡೀಸೆಲ್‌ ಬೆಲೆ ಇಳಿಕೆ ಮಾಡಿ ಸಂತೋಷದ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಖುಷಿಯ ಸಂಗತಿಯನ್ನು ತಿಳಿಸಿದೆ. ಈ ಮೂಲಕ ಜನರ ಮನಗೆಲ್ಲಲು ಕೇಂದ್ರ ಸರ್ಕಾರ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದೆ.

    ಪೆಟ್ರೋಲ್-ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಸುವ ಮೂಲಕ ಬೆಲೆ ಇಳಿಕೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರ ಇದೀಗ ಖಾದ್ಯ ತೈಲದ ಬೆಲೆ ಇಳಿಸುವ ಸಲುವಾಗಿ ಅದರ ಮೇಲಿನ ಮೂಲ ಕರವನ್ನು ಕಡಿತಗೊಳಿಸಿದೆ.

    ಇದನ್ನೂ ಓದಿ: ಅಣ್ಣ-ತಮ್ಮ ಸೇರಿ ಕೆಲಸ ಕೊಟ್ಟಿದ್ದಾತನ ಮಗನನ್ನೇ ಕೊಂದು ಮೂಟೆ ಕಟ್ಟಿದ್ದರು!; ಇಬ್ಬರು ಕೊಲೆ ಆರೋಪಿಗಳ ಬಂಧನ…

    ಕಳೆದ ಒಂದು ವರ್ಷದಿಂದ ಏರುತ್ತಲೇ ಇದ್ದ ಖಾದ್ಯ ತೈಲ ಬೆಲೆಯನ್ನು ಇಳಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ತಳೆದಿದೆ. ಆ ನಿಟ್ಟಿನಲ್ಲಿ ಕಚ್ಚಾ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಮೇಲಿನ ಮೂಲ ಕರವನ್ನು ಶೇ. 2.5ರಿಂದ ಶೂನ್ಯಕ್ಕೆ ಇಳಿಸಿದೆ.

    ಅಲ್ಲದೆ ಈ ಎಣ್ಣೆಗಳ ಮೇಲಿನ ಕೃಷಿಕರವನ್ನೂ ಇಳಿಸಲಾಗಿದೆ. ಕಚ್ಚಾ ತಾಳೆ ಎಣ್ಣೆ ಮೇಲಿನ ಕೃಷಿಕರವನ್ನು ಶೇ. 20ರಿಂದ ಶೇ. 7.5ಗೆ, ಕಚ್ಚಾ ಸೋಯಾಬೀನ್‌ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಕೃಷಿಕರವನ್ನು ಶೇ. 5ಕ್ಕೆ ಇಳಿಸಲಾಗಿದೆ. ಪರಿಣಾಮವಾಗಿ ಒಟ್ಟು ಕರ ಕಚ್ಚಾ ತಾಳೆ ಎಣ್ಣೆಗೆ ಶೇ. 7.5 ಹಾಗೂ ಕಚ್ಚಾ ಸೂರ್ಯಕಾಂತಿ ಮತ್ತು ಸೋಯಾಬೀನ್‌ ಎಣ್ಣೆಗೆ ಶೇ. 5 ಆಗಿರಲಿದೆ.

    ಪುನೀತ್ ರಾಜಕುಮಾರ್ ಸಾವಿನ ಕುರಿತು ಮತ್ತೊಂದು ಅನುಮಾನ!?; ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆಗೂ ದೂರು…

    ಜೊತೆಗಿದ್ದ ಗೆಳೆಯರೇ ಒಟ್ಟಿಗೇ ಉಂಡು, ಕೊಂದರು; ಡ್ರಗ್ಸ್‌ ನಶೆ, ಹಣದ ಆಸೆಗೆ ಬಿದ್ದು ಅಪಹರಿಸಿ ಕೊಲೆ ಮಾಡಿದ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts