More

    ಪ್ರವೇಶ ಶುಲ್ಕ ಏರಿಕೆ ವಿರುದ್ಧ ಎಬಿವಿಪಿ ಪ್ರತಿಭಟನೆ

    ದಾವಣಗೆರೆ: ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಪ್ರವೇಶಾತಿ ಶುಲ್ಕ ಏರಿಕೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಕೋರ್ಸ್ ಶುಲ್ಕ ಹೆಚ್ಚಿಸದೆ ಹಿಂದಿನ ವರ್ಷದ ಮಾದರಿಯನ್ನೆ ಮುಂದುವರೆಸಲು ತೀರ್ಮಾನಿಸಿದ್ದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ ನೀಡಿದ್ದರು. ಆದರೆ ಈಗ ಸರ್ಕಾರ ಪರೋಕ್ಷ ಕ್ರಮಗಳ ಮೂಲಕ ಶುಲ್ಕ ಹೆಚ್ಚಳದ ಆದೇಶ ಹೊರಡಿಸಿದೆ ಎಂದು ಆರೋಪಿಸಿದರು.

    ಪ್ರಸಕ್ತ ಸಾಲಿನಿಂದ 83,526 ರೂ., 90,060 ರೂ. ಗಳಿಗೆ ನಿಗದಿಪಡಿಸಲಾಗಿದೆ. ಕಳೆದ ಬಾರಿಗಿಂತ 10 ರಿಂದ 20 ಸಾವಿರ ರೂ.ವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸರ್ಕಾರ ಕಾಲೇಜುಗಳಿಗೆ ಅವಕಾಶ ನೀಡಿದೆ. ಇದರಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಓದಿಗೆ ಕುತ್ತು ಬಂದಿದೆ ಎಂದು ಆಕ್ಷೇಪಿಸಿದರು.ಸಿಇಟಿ ಕೌನ್ಸ್ಸೆಲಿಂಗ್‌ನಲ್ಲಿ ಭಾಗಿಯಾದವರಿಗೆ ಮೆಡಿಕಲ್ನಲ್ಲೂ ಅವಕಾಶ ನೀಡಬೇಕು. ಇಂಜಿನಿಯರಿಂಗ್ ಸೀಟು ರದ್ದಾದರೆ ವಿದ್ಯಾರ್ಥಿಗಳ ಶುಲ್ಕ ಮೆಡಿಕಲ್ ಕೋರ್ಸ್‌ಗೆ ವರ್ಗಾವಣೆ ಆಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts