More

    ಸರ್ಕಾರಕ್ಕೆ ಒತ್ತಡ ಹೇರಲು ಉಪನ್ಯಾಸಕರ ನಿರ್ಧಾರ

    ಸಿಂಧನೂರು: ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನೂರಾರು ಸಂಖ್ಯೆ ಖಾಸಗಿ ಉಪನ್ಯಾಸಕರು ಸಭೆ ಸೇರಿ, ತಾಲೂಕು ಸಂಘ ರಚನೆ ಹಾಗೂ ಕೋವಿಡ್‌ನಿಂದ ನಾಲ್ಕು ತಿಂಗಳಿಂದ ವೇತನ ಇಲ್ಲದೆ ಸಂಕಷ್ಟದಲ್ಲಿರುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಬಗ್ಗೆ ನಿರ್ಧರಿಸಲಾಯಿತು.

    ಖಾಸಗಿ ಉಪನ್ಯಾಸಕರ ಸಂಘದ ಸಂಚಾಲಕ ಚಂದ್ರಶೇಖರ ಗೊರೇಬಾಳ ಮಾತನಾಡಿ, ಇನ್ನೂ ಎರಡ್ಮೂರು ತಿಂಗಳು ಕಾಲೇಜ್‌ಗಳು ಆರಂಭವಾಗುವದಿಲ್ಲ ಎಂಬ ಮಾಹಿತಿ ಇದೆ. ಉಪನ್ಯಾಸಕರ ಬೇಡಿಕೆಗಳನ್ನು ಕೂಲಂಕುಷವಾಗಿ ಸರ್ಕಾರ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಉಪನ್ಯಾಸಕ ತಿಮ್ಮಣ್ಣ ರಮತ್ನಾಳ ಮಾತನಾಡಿ, ಸೋಮವಾರ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸೋಣ ಎಂದರು. ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹುಸೇನಪ್ಪ ಅಮರಾಪುರ, ನಿಕಟಪೂರ್ವ ಅಧ್ಯಕ್ಷ ಡಾ.ಬಸವರಾಜ ನಾಯಕ, ಪ್ರಕಾಶ ಹಚ್ಚೊಳ್ಳಿ, ನಾಗರಡ್ಡಿ ಕಲ್ಮಂಗಿ ಮಾತನಾಡಿದರು. ಉಪನ್ಯಾಸಕರಾದ ಡಾ.ಮರಿಲಿಂಗಪ್ಪ, ಹೊನ್ನೂರು ಹುಸೇನ, ರಾಮಣ್ಣ ಭೇರ‌್ಗಿ, ಚಿದಾನಂದ, ವಿಶ್ವನಾಥ ಪಾಟೀಲ್ ಗೋನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts