More

    ಸರ್ಕಾರ ಈರುಳ್ಳಿ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಲಿ, ಹಬೊಹಳ್ಳಿ ಉಪತಹಸೀಲ್ದಾರ್‌ಗೆ ಒಕ್ಕೂಟ ಮನವಿ

    ಹಗರಿಬೊಮ್ಮನಹಳ್ಳಿ: ಹಿಂಗಾರು ಈರಳ್ಳಿ ಬೆಳೆಗೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ಈರಳ್ಳಿ ಬೆಳೆಗಾರರ ಒಕ್ಕೂಟ ಶನಿವಾರ ಉಪತಹಸೀಲ್ದಾರ್ ಶಿವಕುಮಾರಗೌಡಗೆ ಮನವಿ ಸಲ್ಲಿಸಿತು.

    ಸಂಘಟನೆಯ ಮುಖಂಡ ಮೈನಳ್ಳಿ ಕೊಟ್ರೇಶಪ್ಪ ಮಾತನಾಡಿ, ರಾಜ್ಯಾದ್ಯಂತ ಲಾಕ್‌ಡೌನ್‌ನಿಂದ ಈರುಳ್ಳಿ ಮಾರುಕಟ್ಟೆ ಬೆಲೆ ಕುಸಿದಿದೆ. ಸದ್ಯ ಕ್ವಿಂಟಾಲ್‌ಗೆ 350 ರೂ.ನಂತೆ ಮಾರಾಟವಾಗುತ್ತಿದೆ. ರೈತರಿಗೆ ಕ್ವಿಂಟಾಲ್‌ಗೆ 1700 ರೂ. ವೆಚ್ಚ ತಗಲುತ್ತದೆ. ಬೆಳೆಗೆ ನಿರ್ದಿಷ್ಟ ದರ ಸಿಗದೇ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಈರುಳ್ಳಿ ಬೆಳೆಗಾರರ ನಷ್ಟ ಪರಿಶೀಲಿಸಿ ಶೀಘ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

    ಒಕ್ಕೂಟದ ತಾಲೂಕು ಅಧ್ಯಕ್ಷ ಗುಡ್ಡದ ಮೋಹನ ರೆಡ್ಡಿ, ವರಕೇರಿ ಹನುಮಂತಪ್ಪ, ಚಂದ್ರಶೇಖರ ಪಾಟೀಲ್, ಅಳವಂಡಿ ವೆಂಕಣ್ಣ, ಅಂಬಿಗರ ಅಂಜಿನಪ್ಪ, ಬಾಗಲಕೋಟೆ ಶಿವಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts