More

    ಮೃತಯೋಧನಿಗೆ ಸರ್ಕಾರದ ಅಗೌರವ

    ವಿಜಯವಾಣಿ ಸುದ್ದಿಜಾಲ ಗದಗ

    ಬಿಎಸ್​ಎಫ್​ನಲ್ಲಿ 14 ವರ್ಷ ಸೇವೆ ಸಲ್ಲಿಸಿ ಮಡಿದ ವೀರಯೋಧನ ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿ ಸರ್ಕಾರ ಸಮಾಧಿ ಕಟ್ಟಿ ಗೌರವಿಸುವ ಸೌಜನ್ಯ ತೋರಿಲ್ಲ. ಸೈನಿಕರ ಸೇವೆಯನ್ನೂ ಗುರುತಿಸದೆ ಸತಾಯಿಸುತ್ತಿರುವ ಸರ್ಕಾರದ ವರ್ತನೆ ಖಂಡನೀಯ ಎಂದು ಯೋಧನ ತಾಯಿ ಕೊರ್ಲಹಳ್ಳಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಆರಂಭಿಸಿದ್ದಾರೆ.

    ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಯೋಧ ಕಟ್ಟೆಪ್ಪ ಹನುಮಪ್ಪ ಡೊಳ್ಳಿನ ಅವರು 2001ರಲ್ಲಿ ಬಿಎಸ್​ಎಫ್ ಸೇರಿ ಜಮ್ಮು ಕಾಶ್ಮೀರ, ಬಿಹಾರ, ಛತ್ತಿಸಗಡ ಸೇರಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು 2015ರಲ್ಲಿ ಅಕಾಲಿಕವಾಗಿ ಮರಣವನ್ನಪ್ಪಿದರು. ಈ ಸಂದರ್ಭದಲ್ಲಿ ಕುಟುಂಬದವರು ತಮ್ಮ ಹೊಲದಲ್ಲಿಯೇ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಿದ್ದರು. ಆದರೆ, ಜಿಲ್ಲಾಡಳಿತ ಯೋಧನ ಅಂತಿಮ ಸಂಸ್ಕಾರವನ್ನು ಸ್ವಂತ ಹೊಲದಲ್ಲಿ ಮಾಡುವುದು ಸರಿಯಲ್ಲ ಎಂದು ಹೇಳಿ ಅಂತಿಮ ಸಂಸ್ಕಾರವನ್ನು ಸರ್ಕಾರಿ ಸ್ಥಳದಲ್ಲಿ ಮಾಡಲಾಯಿತು. ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲಿ ಸಮಾಧಿ ನಿರ್ವಿುಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಐದು ವರ್ಷ ಕಳೆದರೂ ಅಂತ್ಯಸಂಸ್ಕಾರ ಸ್ಥಳದಲ್ಲಿ ಸಮಾಧಿ ನಿರ್ವಿುಸಿಲ್ಲ.

    ‘ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲಿ ಸಮಾಧಿ ನಿರ್ವಿುಸಬೇಕೆಂದು ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಯೋಧನ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಅಂತ್ಯಸಂಸ್ಕಾರದ ಸ್ಥಳದಲ್ಲಿ ಗಿಡಗಂಟೆ ಬೆಳೆದಿವೆ. ಪ್ರತಿವರ್ಷ ಆಗಸ್ಟ್ 15, ಜನವರಿ 26ರಂದು ಸ್ವಂತ ಖರ್ಚಿನಲ್ಲಿ ಆ ಸ್ಥಳವನ್ನು ನಾವೇ ಸ್ವಚ್ಛಗೊಳಿಸಿ ಧ್ವಜಾರೋಹಣ ಮಾಡುತ್ತೇವೆ. ದೇಶದ ಗಡಿ ಕಾದು ಮರಣವನ್ನಪ್ಪಿದ ಯೋಧನಿಗೆ ಕಿಂಚಿತ್ ಗೌರವವನ್ನು ಕೊಡುತ್ತಿಲ್ಲ. ಹೀಗಾಗಬಾರದು ಎಂಬ ಕಾರಣದಿಂದ ಅಂತ್ಯಸಂಸ್ಕಾರವನ್ನು ನಮ್ಮ ಜಮೀನಿನಲ್ಲಿಯೇ ಮಾಡುತ್ತೇವೆ ಎಂದು ಹೇಳಿದ್ದೇವು. ಆದರೆ, ನಮ್ಮ ಮಾತನ್ನು ಯಾರೂ ಕೇಳಲಿಲ್ಲ. ಸರ್ಕಾರಿ ಜಾಗೆಯಲ್ಲಿ ಅಂತಿಮ ಕ್ರಿಯೆ ಪೂರೈಸಿದರು. ಐದು ವರ್ಷವಾದರೂ ಸಮಾಧಿ ನಿರ್ವಿುಸುತ್ತಿಲ್ಲ’ ಎಂದು ಮೃತ ಯೋಧನ ಸಹೋದರ ಶಿವಕುಮಾರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಪುತ್ರ ಮೃತಪಟ್ಟು ಐದು ವರ್ಷವಾದರೂ ಸಮಾಧಿ ನಿರ್ವಿುಸುತ್ತಿಲ್ಲ. ದೇಶಕ್ಕಾಗಿ ದುಡಿದ ಮಗನಿಗೆ ಸರ್ಕಾರ ಗೌರವ ಕೊಡುತ್ತಿಲ್ಲ ಎಂಬ ನೋವು ಕಾಡುತ್ತಿದೆ. ಜನವರಿ 26, ಆಗಸ್ಟ್ 15 ಬಂತೆಂದರೆ ಯಾಕಾದರೂ ಈ ದಿನಗಳು ಬರುತ್ತವೆ ಎನ್ನುವಂತಾಗಿದೆ. ನಾವು ಏನನ್ನೂ ಬೇಡುತ್ತಿಲ್ಲ. ದೇಶದ ಗಡಿ ಕಾಯ್ದ ಮಗನ ಸಮಾಧಿ ನಿರ್ವಿುಸಿಕೊಟ್ಟರೆ ಸಾಕು.

    | ಗಂಗವ್ವ ಡೊಳ್ಳಿನ ಮೃತ ಯೋಧನ ತಾಯಿ

    ಕೊರ್ಲಹಳ್ಳಿ ಗ್ರಾಮದಲ್ಲಿ ಐದು ವರ್ಷದ ಹಿಂದೆ ಮರಣವನ್ನಪ್ಪಿದ ಯೋಧ ಕಟ್ಟೆಪ್ಪ ಡೊಳ್ಳಿನ ಅವರ ಸಮಾಧಿ ನಿರ್ವಿುಸಲು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ಅನುಮೋದನೆ ಸಿಕ್ಕ ಕೂಡಲೇ ಕೆಲಸ ಆರಂಭಿಸಲಾಗುವುದು. ಪ್ರತಿಭಟನೆ ಮಾಡುವುದರಿಂದ ಪ್ರಯೋಜನ ಇಲ್ಲ ಎಂದು ಮೃತ ಯೋಧನ ತಾಯಿಗೆ ಮನವರಿಕೆ ಮಾಡಲಾಗಿದೆ. ಶೀಘ್ರ ಸಮಾಧಿ ನಿರ್ವಿುಸಲಾಗುವುದು.

    |ಯಲ್ಲಪ್ಪ ಗೋಣೆಣ್ಣವರ

    ಪ್ರಭಾರಿ ತಹಸೀಲ್ದಾರ್, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts