More

    ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಯೇ ಇಲ್ಲ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಪುತ್ತೂರು ಜಿಲ್ಲಾ ಕೇಂದ್ರವಾದರೆ ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲು ಸಿದ್ಧವಾಗಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ವೈದ್ಯಾಧಿಕಾರಿಯೇ ಇಲ್ಲ…
    ಪುತ್ತೂರಿನ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ 500ಕ್ಕೂ ಅಧಿಕ ರೋಗಿಗಳು ಸಂದರ್ಶಿಸುತ್ತಾರೆ. ಆದರೆ ವೈದ್ಯಾಧಿಕಾರಿ ಹುದ್ದೆ 1 ವರ್ಷಗಳಿಂದ ಖಾಲಿಯಿದ್ದು, ಪ್ರಭಾರ ನೆಲೆಯಲ್ಲೇ ವೈದ್ಯರೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಕೇವಲ ಪುತ್ತೂರು ಮಾತ್ರವಲ್ಲದೆ ಗ್ರಾಮಾಂತರ ಭಾಗದ ಸರ್ಕಾರಿ ಆಸ್ಪತ್ರೆಯಲ್ಲೂ ಸಿಬ್ಬಂದಿ ಕೊರತೆ ಎದುರಾಗಿ ಆರೋಗ್ಯ ಸೇವೆಯಲ್ಲಿ ತೊಂದರೆಯಾಗುತ್ತಿದೆ.
    ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಒಟ್ಟು ಮಂಜೂರಾದ 15 ಪ್ರಮುಖ ಹುದ್ದೆಗಳ ಪೈಕಿ 8 ಹುದ್ದೆ ಖಾಲಿ ಇದೆ. ವೈದ್ಯಾಧಿಕಾರಿ ಹುದ್ದೆಯೂ ತೆರವಾಗಿದ್ದು, ಡಾ.ಆಶಾ ಪುತ್ತೂರಾಯ ಪ್ರಭಾರ ಹುದ್ದೆಯಲ್ಲಿದ್ದಾರೆ. ಜತೆಗೆ ಹಿರಿಯ ವೈದ್ಯಾಧಿಕಾರಿ, ಫಿಸಿಶಿಯನ್, ಸೀರೋಗ ತಜ್ಞ, ಜನರಲ್ ಸರ್ಜನ್, ಸರ್ಜನ್, ರೇಡಿಯೋಲಾಜಿಸ್ಟ್, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್-2 ಸೇರಿದಂತೆ ಇತರ ಸಿಬ್ಬಂದಿ ಹುದ್ದೆಗಳೂ ಇಲ್ಲಿ ಖಾಲಿ ಇವೆ.

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸಿಬ್ಬಂದಿ ಕೊರತೆ
    ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದ್ದರೂ, ಸರ್ಕಾರ ನೇಮಕಾತಿ ಮಾಡಲು ಮುಂದಾಗಿಲ್ಲ. ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ, ಸ್ತ್ರೀರೋಗ ಹಾಗೂ ಮಕ್ಕಳ ತಜ್ಞರು, ಫಿಜಿಶಿಯನ್ ಹುದ್ದೆ ಖಾಲಿಯಿದೆ. ಕೊಲ, ತಿಂಗಳಾಡಿ, ಪಾಣಾಜೆಯಲ್ಲಿ ತಲಾ 1 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ.

    ಸುಳ್ಯ- ಬೆಳ್ತಂಗಡಿಯಲ್ಲೂ ವೈದ್ಯರಿಲ್ಲ!
    ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ 11 ಮಂದಿ ವೈದ್ಯರ ಹುದ್ದೆಯಿದ್ದು, 9 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರೇಡಿಯೋಲಾಜಿಸ್ಟ್, ಸೀರೋಗ ತಜ್ಞ, ಮಕ್ಕಳ ತಜ್ಞರೇ ಈ ಆಸ್ಪತ್ರೆಯಲ್ಲಿ ಇಲ್ಲ. ಏಳು ಮಂದಿ ಕ್ಲರ್ಕ್‌ಗಳಿರಬೇಕಾದ ಆಸ್ಪತ್ರೆಯಲ್ಲಿ ಓರ್ವ ಮಾತ್ರ ಕರ್ತವ್ಯದಲ್ಲಿದ್ದಾರೆ. 31 ಡಿ ದರ್ಜೆ ನೌಕರರ ಪೈಕಿ ಓರ್ವ ನೌಕರ ಮಾತ್ರ ಕರ್ತವ್ಯದಲ್ಲಿದ್ದು, ಸಮಸ್ಯೆ ಉಂಟಾಗದಿರಲೆಂಬ ಕಾರಣಕ್ಕೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಲಾಗಿದೆ. ಎಕ್ಸ್‌ರೇ, ಲ್ಯಾಬ್ ಟೆಕ್ನೀಷಿಯನ್, ಾರ್ಮಾಸಿಸ್ಟ್‌ಗಳನ್ನು ನೇಮಕ ಈವರೆಗೆ ಆಗಿಲ್ಲ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿಯೂ ಮುಖ್ಯ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ನೇತ್ರ ತಜ್ಞೆ ಡಾ.ವಿದ್ಯಾವತಿ ಪ್ರಭಾರ ವಹಿಸಿಕೊಂಡಿದ್ದಾರೆ. ಪ್ರಸೂತಿ ಮತ್ತು ಸೀರೋಗ ತಜ್ಞರ ಹುದ್ದೆ ಖಾಲಿಯಿದ್ದು, ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಹಿರಿಯ ವೈದ್ಯಾಧಿಕಾರಿ, ಶುಶ್ರೂಷಕ ಅಧೀಕ್ಷಕರು ದರ್ಜೆ-2, ಹಿರಿಯ ಪ್ರಯೋಗಶಾಲಾ ತಂತ್ರಜ್ಞ, ಹಿರಿಯ ಮತ್ತು ಕಿರಿಯ ಾರ್ಮಾಸಿಸ್ಟ್, ದ್ವಿತೀಯ ದರ್ಜೆ ಸಹಾಯಕರು, ಕ್ಲರ್ಕ್ ಸೇರಿದಂತೆ ಇತರ ಸಿಬಂದಿ ಹುದ್ದೆಗೆ ಈವರೆಗೆ ನೇಮಕಾತಿ ನಡೆದಿಲ್ಲ.

    ಯಾವ ಆಸ್ಪತ್ರೆಗಳಲ್ಲಿ ಹುದ್ದೆ ಖಾಲಿ ಇದೆ ಎಂಬುದನ್ನು ಪಟ್ಟಿ ಮಾಡಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ಭರ್ತಿ ಮಾಡಲು ಆದೇಶ ಆಗಿದೆ. ಕೆಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
    ಡಾ.ಎಂ.ರಾಮಕೃಷ್ಣ ರಾವ್, ದ.ಕ ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts