More

    ಪಂಚಾಕ್ಷರ ಗವಾಯಿಗಳನ್ನು ಮರೆತ ಸರ್ಕಾರ

    ಹಾನಗಲ್ಲ: ಸಂಗೀತ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ಗಾನಯೋಗಿ ಪಂಚಾಕ್ಷರ ಗವಾಯಿಗಳ ಹೆಸರಿನಲ್ಲಿ ಸರ್ಕಾರ ರಾಜ್ಯ-ರಾಷ್ಟ್ರ ಮಟ್ಟದ ಯಾವುದೇ ಪ್ರಶಸ್ತಿಗಳನ್ನು ಘೊಷಿಸದಿರುವುದು ವಿಷಾದದ ಸಂಗತಿ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ಖೇದ ವ್ಯಕ್ತಪಡಿಸಿದರು.

    ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಲಿಂ.ಪಂ. ಪಂಚಾಕ್ಷರ ಶಿವಯೋಗಿಗಳ 130ನೇ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪಂ.ಪಂಚಾಕ್ಷರರ ಶಿಷ್ಯ ಸಮುದಾಯ ದೇಶಾದ್ಯಂತ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಅಂಥ ಮಹಾತ್ಮರ ಕುರಿತು ಸರ್ಕಾರದ ವತಿಯಿಂದ ಜಯಂತ್ಯುತ್ಸವವನ್ನು ಆಚರಿಸಬೇಕಾಗಿತ್ತು. ಅವರ ಹುಟ್ಟೂರಾದ ಕಾಡಶೆಟ್ಟಿಹಳ್ಳಿಯನ್ನು ಸಂಗೀತ ಗ್ರಾಮವನ್ನಾಗಿ ಪರಿವರ್ತಿಸಬೇಕಾಗಿತ್ತು. ಅಲ್ಲದೆ, ಸಂಗೀತೋತ್ಸವಕ್ಕೆ ಸಭಾಭವನವನ್ನು ವ್ಯವಸ್ಥೆಗೊಳಿಸದಿರುವುದು ಸರ್ಕಾರದ ನಿರ್ಲಕ್ಷ್ಯನ್ನು ತೋರಿಸುತ್ತಿದೆ. ಸಂಗೀತ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲಾವಿದರ ಬಗ್ಗೆ ತಾತ್ಸಾರ ಭಾವನೆ ತಾಳಿದರೆ ಸತ್ಸಮಾಜ ನಿರ್ವಣಕ್ಕೆ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಸಿದರು.

    ಸಾನ್ನಿಧ್ಯ ವಹಿಸಿದ್ದ ಶಂಭುಲಿಂಗ ಶಿವಾಚಾರ್ಯರು, ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮಾತನಾಡಿದರು.

    ಸಂಗೀತೋತ್ಸವ: ಎರಡು ದಿನ ಅಹೋರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಂ.ಬಿ.ಎಸ್. ಮದ್ದಾನಿಮಠ, ಅಕ್ಕಮಹಾದೇವಿ ಮದ್ದಾನಿಮಠ, ಡಾ. ಮೃತ್ಯುಂಜಯ ಅಗಡಿ, ವೆಂಕಟೇಶ ಹಾಲಕೋಡ, ಬಸವರಾಜ ವಂದಲಿ, ಗೋರಪ್ಪ ಜೀರಟಗಿ, ಸೋಮನಾಥ ಬೆಳೆಬಾಳ, ಪ್ರಕಾಶ ಆನವಟ್ಟಿ, ಡಾ.ವೆಂಕಟೇಶ ಪೂಜಾರ, ಶಿವಬಸಯ್ಯ ಚರಂತಿಮಠ, ಪಂ. ಶರಣಕುಮಾರ ಗುತ್ತರಗಿ, ಪರಶುರಾಮ ಭಜಂತ್ರಿ, ಬಸವಣ್ಣಯ್ಯಶಾಸ್ತ್ರಿಗಳು ವೆಂಕಟಾಪುರಮಠ, ದರ್ಶನ ಕೋತಂಬ್ರಿ, ಶುಕ್ರುಸಾಬ ಗದಗ ಇತರರು ಸಂಗೀತ ಸೇವೆ ನೀಡಿದರು.

    ಜಿಪಂ ಸದಸ್ಯರಾದ ಮಾಲತೇಶ ಸೊಪ್ಪಿನ, ಟಾಕನಗೌಡ ಪಾಟೀಲ, ತಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ರಾಜು ಗೌಳಿ, ಡಿ.ಎಸ್.ಪಾಟೀಲ, ಕಲ್ಯಾಣಕುಮಾರ ಶೆಟ್ಟರ, ಕೃಷ್ಣ ಈಳಿಗೇರ, ಬಸವರಾಜ ಅಗಸನಹಳ್ಳಿ, ಚಂಪಾವತಿ ಪೂಜಾರ, ಎಸ್.ಎಂ. ಕೋತಂಬ್ರಿ, ದಯಾನಂದ ನಾಗನೂರ, ಡಾ. ಪ್ರಭು ಪಾಟೀಲ, ಇತರರು ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಚಿಕ್ಕಮಠ ಹಾಗೂ ಶರಣಪ್ಪ ದೊಡ್ಡಮನಿ ಕಾರ್ಯಕ್ರಮ ನಿರ್ವಹಿಸಿದರು.

    ಬಸಲಿಂಗಯ್ಯ ಮದ್ದಾನಿಮಠ, ಡಾ. ವೆಂಕಟೇಶ ಪೂಜಾರಗೆ ಪ್ರಶಸ್ತಿ ಪ್ರದಾನ: ಗಾನಯೋಗಿ ಲಿಂ. ಪಂಚಾಕ್ಷರ ಶಿವಯೋಗಿಗಳ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಲಾ ಸಂಘದಿಂದ ಪ್ರತಿ ವರ್ಷ ನೀಡಲಾಗುವ ಕುಮಾರ ಪಂಚಾಕ್ಷರೇಶ್ವರ ಪ್ರಶಸ್ತಿಯನ್ನು ಧಾರವಾಡದ ವಯೋಲಿನ್ ವಾದಕ ಪಂ.ಬಸಲಿಂಗಯ್ಯ ಮದ್ದಾನಿಮಠ ಅವರಿಗೆ ನೀಡಿ ಗೌರವಿಸಲಾಯಿತು. ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದಿಂದ ಡಾ.ವೆಂಕಟೇಶ ಪೂಜಾರ ಅವರಿಗೆ ಸಂಗೀತ ಸುರಭಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸರಿಗಮಪ ಖ್ಯಾತಿಯ ಕಲಾವಿದ ದರ್ಶನ್ ಕೋತಂಬ್ರಿ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts