More

    ಸರ್ಕಾರಿ ನೌಕರರ ಕ್ರೀಡಾಕೂಟ: ರಾಷ್ಟ್ರಮಟ್ಟಕ್ಕೆ ಆಯ್ಕೆ

    ಹೊಸಪೇಟೆ: ಇತ್ತೀಚೆಗೆ ತುಮಕೂರಿನಲ್ಲಿ ಆಯೋಜಿಸಿದ್ದ ೨೦೨೨ -೨೩ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜಯನಗರ ಜಿಲ್ಲೆಯ ನೌಕರರು ಜಯ ಸಾಧಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ೫೦ ವರ್ಷದ ಪುರುಷರ ವಿಭಾಗದ ಚಕ್ರ ಎಸೆತದಲ್ಲಿ ಹಗರಿಬೊಮ್ಮನಹಳ್ಳಿಯ ಶಿಕ್ಷಕ ನಂದೀಶ ಬಾಬು(ಪ್ರಥಮ), ೧೦,೦೦೦ ಮೀಟರ್ ಓಟದ ಸ್ಪರ್ಧೆಯಲಿ ಹಗರಿಬೊಮ್ಮನಹಳ್ಳಿ ಅಲ್ಪಸಂಖ್ಯಾತ ಇಲಾಖೆ ನೌಕರ ನಾಗರಾಜ(ದ್ವಿತೀಯ), ಕುಸ್ತಿ ೧೨೫ಕೆ.ಜಿ. ವಿಭಾಗದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಹಿಂದುಳಿದ ವರ್ಗ ಸಮಾಜ ಕಲ್ಯಾಣ ಇಲಾಖೆ ನೌಕರ ಪೃತ್ವಿರಾಜ್(ಪ್ರಥಮ) ಸ್ಥಾನ ಗಳಿಸಿದ್ದಾರೆ.

    ಕುಸ್ತಿ ೮೨ಕೆ.ಜಿ. ವಿಭಾಗದಲ್ಲಿ ಹಗರಿಬೊಮ್ಮನಹಳ್ಳಿ ಆರೋಗ್ಯ ಇಲಾಖೆ ನೌಕರ ಎಂ.ಕೆ.ಸಂತೋಷ(ದ್ವಿತೀಯ), ಪವರ್ ಲಿಫ್ಟಿಂಗ್ ಮತ್ತು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆ ತಾಲೂಕಿನ ಡಣನಾಯಕನಕೆರೆ ಶಾಲಾ ಶಿಕ್ಷಕ ಆರ್.ಎಸ್.ನಾಗರಾಜ(ದ್ವಿತೀಯ) ಫುಟ್ ಬಾಲ್ ಕ್ರೀಡಾಕೂಟದಲ್ಲಿ ಹರಪನಹಳ್ಳಿಯ ಶಿಕ್ಷಕ ನವೀನ್ ಕುಮಾರ್ ಉತ್ತಮ ಆಟ ಪ್ರದರ್ಶಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ನಾಟಕ ವಿಭಾಗದಲ್ಲಿ ಕೊಟ್ಟೂರಿನ ತಂಡ ಪ್ರದರ್ಶಿಸಿದ ಸಾಕ್ರಟೀಸ್ ನಾಟಕ ಪ್ರಥಮ ಬಹುಮಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

    ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಾಯಿಲಿನ್‌ನಲ್ಲಿ ಹೊಸಪೇಟೆ ತಾಲೂಕು ಶಾಲಾ ಶಿಕ್ಷಣ ಇಲಾಖೆ ಬಿಆರ್‌ಪಿಯಾಗಿರುವ ಟಿ.ಕೆ.ರೂಪಾ, ಹಿಂದೂಸ್ತಾನಿ ಸಂಗೀತ ಗಾಯನದಲ್ಲಿ ಹೊಸಪೇಟೆ ತಾಲೂಕಿನ ದೇವಲಾಪುರ ಶಾಲಾ ಶಿಕ್ಷಕಿ ಪಲ್ಲವಿ ಭಟ್ ಹಾಗೂ ಮಹಿಳಾ ಕುಸ್ತಿ ವಿಭಾಗದಲ್ಲಿ ಹರಪನಹಳ್ಳಿಯ ಶ್ವೇತಾ ಪಾಟೀಲ್ ತೃತೀತ ಸಾಧನೆ ತೋರಿದ್ದು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts