More

    ವಿಮಾನದಲ್ಲೂ ಸಿಗಲಿದೆ ವೈ-ಫೈ!

    ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರಿಗೆ ವೈ-ಫೈ ಸೇವೆ ಒದಗಿಸಲು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೋಮವಾರ ಅನುಮತಿ ನೀಡಿದೆ.

    ಇದರಿಂದಾಗಿ ದೇಶದೊಳಗೆ ಸಂಚರಿಸುವ ವಿಮಾನಗಳಲ್ಲಿ ವೈ-ಫೈ ಬಳಸಬಹುದಾಗಿದೆ. ಲ್ಯಾಪ್​ಟಾಪ್, ಸ್ಮಾರ್ಟ್​ಫೋನ್, ಟ್ಯಾಬ್ಲೆಟ್, ಸ್ಮಾರ್ಟ್​ವಾಚ್ ಹಾಗೂ ಇ-ರೀಡರ್ ಸೇರಿ ಇನ್ನಿತರ ಉಪಕರಣಗಳು ಫ್ಲೈಟ್​ವುೂಡ್​ನಲ್ಲಿದ್ದರೂ ವೈ-ಫೈ ಸೇವೆ ಬಳಸಬಹುದಾಗಿದೆ. ನಾಗರಿಕ ವಿಮಾನಯಾನದ ಮಹಾನಿರ್ದೇಶಕರು ಪ್ರಮಾಣಿಕರಿಸಿದ ಬಳಿಕ ವಿಮಾನಗಳಲ್ಲಿ ವೈ-ಫೈ ಬಳಕೆ ಜಾರಿಯಾಗಲಿದೆ. ಲ್ಯಾಂಡಿಂಗ್ ಮತ್ತು ಟೇಕಾಫ್ ಸಮಯಗಳನ್ನು ಹೊರತುಪಡಿಸಿ ಹಾರಾಟದ ಸಮಯದಲ್ಲಿ ವೈ-ಫೈ ಸೌಲಭ್ಯ ಸಿಗಲಿದೆ. ಪೈಲಟ್​ನ ಆದೇಶದ ಮೇರೆಗೆ ಪ್ರಯಾಣಿಕರು ತಮ್ಮ ಮೊಬೈಲ್​ಗಳನ್ನು ಫ್ಲೈಟ್ ಮೋಡ್​ಗೆ ಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts