More

    ಕೃಷಿ ಕಾಯಕದಿಂದ ಮನ ಶುದ್ಧಿ

    ಗೊರೇಬಾಳ: ಕೃಷಿ ಕಾಯಕ ಮಾಡುವವರ ಮನೆ ಶುದ್ಧಿ, ಮನ ಶುದ್ಧಿ ಎಂಬುದು ಹನ್ನೇರಡೆನೆ ಶತಮಾನದಲ್ಲಿ ಬಸವಾದಿ ಶರಣರು ಬಣ್ಣಿಸಿದ್ದರು ಎಂದು ಬಿಜೆಪಿ ಮುಖಂಡ ಶಿವನಗೌಡ ಗೊರೇಬಾಳ ಹೇಳಿದರು.

    ಗೊರೇಬಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜಾರಾಮರಾವ್ ನಾಡಗೌಡ, ಹನುಮನಗೌಡ ನೆಟೇಕಲ್ ಹಾಗೂ ಬಲಸು ಸುಬ್ಬಾರಾವ್ ಸ್ಮಾರಕ ದತ್ತಿ ಉಪನ್ಯಾಸ ಅಂಗವಾಗಿ ಏರ್ಪಡಿಸಿದ್ದ ಪರಿಷತ್ತಿನ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕನ್ನಡ ಸಾಹಿತ್ಯ ಪರಿಷತ್ ನಗರ ಪ್ರದೇಶಗಳಿಗೆ ಸಿಮೀತವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ತನ್ನ ಚಟುವಟಿಕೆ ಮಾಡುತ್ತಿದೆ. ಇದರಿಂದ ಮಕ್ಕಳಲ್ಲೂ ಸಾಹಿತ್ಯ, ಸಂಸ್ಕೃತಿಯ ಕಂಪು ಬೀರುತ್ತಿದೆ ಎಂದರು.

    ಕೃಷಿ ಮತ್ತು ಹೈನುಗಾರಿಕೆ ಕುರಿತು ಉಪನ್ಯಾಸ ನೀಡಿದ ಶಾಂತಿನಗರದ ಸಾವಯವ ಕೃಷಿಕ ಗೋಪಿ ಬಂಬು, ನಾನು ಇಂಜಿನಿಯರಿಂಗ್ ಪದವೀಧರ. ಕರೊನಾ ಕಾಲದಲ್ಲಿ ಕೃಷಿ ಆಸಕ್ತಿ ಬೆಳೆಸಿಕೊಂಡೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೃಷಿ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆದರೆ ಕೃಷಿ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ತಾಳ್ಮೆ, ನಿರಂತರ ಪ್ರಯತ್ನ ಬೇಕು. ಇಲ್ಲಿನ ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ತಕ್ಕಂತೆ ಹೊಸ ಪ್ರಯೋಗಗಳನ್ನು ಮಾಡಬೇಕಿದೆ. ಇಂಜಿನಿಯರಿಂಗ್‌ಗಿಂತಲೂ ಕೃಷಿ ಹೆಚ್ಚು ನೆಮ್ಮದಿ ನೀಡಿದೆ ಎಂದು ಹೇಳಿದರು.
    ರೈತ ಮುಖಂಡ ಶರಣೇಗೌಡ ಮಾತನಾಡಿ, ಪರಿಷತ್ ಹತ್ತಾರು ಸೃಜನಶೀಲ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

    ಶರಬಯ್ಯ ತುರ್ವಿಹಾಳ ಮಾತನಾಡಿದರು. ಬಂಗಾರಿ ಕ್ಯಾಂಪಿನ ಸಿದ್ಧಾಶ್ರಮದ ಸದಾನಂದ ಶರಣರು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು. ಶರಣೇಗೌಡ ನೆಟೇಕಲ್, ಕೆಎಂಎಫ್‌ನ ಬಲಸು ಸೂರ್ಯನಾರಾಯಣ, ಕರೀಶ್ ಜವಾಲಿ, ಮುಖ್ಯಶಿಕ್ಷಕಿ ಸುಬ್ಬುಲಕ್ಷ್ಮೀ, ಶರಬಯ್ಯಸ್ವಾಮಿ ಹಿರೇಮಠ, ವೀರೇಶ ಶಿವನಗುತ್ತಿ, ಕರೀಶ್ ಜವಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts