More

    ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಕನಕದಾಸರು

    ಗೊರೇಬಾಳ: ಭಕ್ತಿ ಪಂಥದ ಹರಿದಾಸರಲ್ಲಿ ಒಬ್ಬರಾಗಿದ್ದ ಕನಕದಾಸರು, ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ ಕವಿ. ಅವರು ಕುರುಬ ಸಮುದಾಯಕ್ಕಷ್ಟೇ ಸೀಮಿತವಲ್ಲ. ಎಲ್ಲ ಸಮುದಾಯಕ್ಕೂ ಬೇಕಾದವರಾಗಿದ್ದರು ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತ್ತು ನಿಗಮದ ಅಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದರು.

    ಗ್ರಾಮದಲ್ಲಿ ಹಾಲುಮತ ಸಮಾಜ ಮಂಗಳವಾರ ಹಮ್ಮಿಕೋಂಡಿದ್ದ ಕನಕದಾಸರ 535ನೇ ಜಯಂತಿ ಉದ್ಘಾಟಿಸಿ ಮಾತನಾಡಿ, 15-16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ಸಮರ ಸಾರಿದ ಕನಕದಾಸರು, ಸುಮಾರು 316 ಕೀರ್ತನೆಗಳು ಹಾಗೂ ಸಾಹಿತ್ಯದಿಂದ ಜೀವನ ಪಾಠ ಸಾರಿದ್ದಾರೆ ಎಂದರು.

    ಬಸವಣ್ಣನ ನಂತರ ಅಶ್ಪಶ್ಯತೆಯನ್ನು ತೊಡೆದು ಹಾಕಲೆಂದು ಜಾತಿ ಮತ ಕುಲಗಳ ಬೇಧಭಾವ ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರೆಂದು ಹೇಳಿದರು.

    ಕನಕದಾಸರ ಭಾವಚಿತ್ರವನ್ನು ಶಿವ ಸರ್ಕಲ್‌ವರೆಗೆ ಮೆರವಣಿಗೆ ಮಾಡಲಾಯಿತು. ಸುಮಂಗಲೆಯರಿಂದ ಕಳಸ ಹಾಗೂ ಡೊಳ್ಳು ಕುಣಿತದೊಂದಿಗೆ ಕನಕದಾಸರ ಭಾವಚಿತ್ರಕ್ಕೆ ಪೂಜಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts