More

  ಗೋಪಾಲಯ್ಯ ಕೊಲೆ ಬೆದರಿಕೆ: ಮೇಲ್ಮನೆಯಲ್ಲಿ ಜಟಾಪಟಿ

  ಬೆಂಗಳೂರು:
  ಶಾಸಕ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ಪದ್ಮರಾಜನ್ ಅವರನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಮೇಲ್ಮನೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
  ಹಾಲಿ ಶಾಸಕರು ಮತ್ತು ಮಾಜಿ ಸಚಿವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜನಪ್ರತಿನಿಧಿಗೆ ರಕ್ಷಣೆ ಇಲ್ಲವೆಂದರೆ ಜನ ಸಾಮಾನ್ಯರ ಸ್ಥಿತಿ ಏನು? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ವಾಗ್ವಾದ ನಡೆಯಿತು.
  ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ ಖರ್ಗೆ, ನಿಮ್ಮ ಸರ್ಕಾರ ಇದ್ದಾಗ ನನಗೆ ಶೂಟ್ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಗೆ ನೀವು ನನ್ನ ವಿರುದ್ದ ಅಭ್ಯರ್ಥಿ ಮಾಡಿದಿರಿ. ಆಗ ಜನಪ್ರತಿನಿಧಿಗಳ ಬಗ್ಗೆ ಇಲ್ಲದ ಕಾಳಜಿ ಈಗ ಬಿಜೆಪಿಗೆ ಬಂದಿರುವುದು ಅಚ್ಚರಿ ಎಂದು ಕಾಲೆಳೆದರು.
  ಕೊಲೆ ಬೆದರಿಕೆ ಗಂಭೀರವಾದ ವಿಚಾರವಾಗಿದ್ದು ಈ ಬಗ್ಗೆ ಗೃಹ ಸಚಿವರೇ ಸದನಕ್ಕೆ ಬಂದು ಉತ್ತರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts