More

    ಭಾರತದಲ್ಲಿ ಸದ್ಯಕ್ಕಿಲ್ಲ ಗೂಗಲ್​ ಪ್ಲೇ ಸ್ಟೋರ್​ ರೂಲ್ ಜಾರಿ…

    ಗೂಗಲ್ ಸಂಸ್ಥೆ ಭಾರತದಲ್ಲಿ ಜಾರಿಗೊಳಿಸಬೇಕು ಎಂದುಕೊಂಡಿದ್ದ ಶೇ. 30 ಗೂಗಲ್ ಪ್ಲೇ ಸ್ಟೋರ್​ ನಿಯಮಗಳನ್ನು ಸದ್ಯಕ್ಕೆ ತಡೆ ಹಿಡಿದಿದೆ. ಪರಿಣಾಮವಾಗಿ ಭಾರತೀಯ ಡೆವೆಲಪರ್ಸ್​ 2022ರ ವರೆಗೂ ನಿರಾಳರಾಗಿರಬಹುದು.

    ಜಾಗತಿಕವಾಗಿ ಈ ನಿಯಮ ಮುಂದಿನ ಸೆಪ್ಟೆಂಬರ್​ನಿಂದಲೇ ಜಾರಿಗೆ ಬರಲಿದೆ. ಆದರೆ ಇದಕ್ಕೆ ಭಾರತೀಯ ಡೆವೆಲಪರ್ಸ್​ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಗಮನಿಸಿರುವ ಗೂಗಲ್​ ಸಂಸ್ಥೆ, ಇದೀಗ 2022ರ ಏಪ್ರಿಲ್​ ವರೆಗೂ ಜಾರಿಗೊಳಿಸದಿರಲು ನಿರ್ಧರಿಸಿದೆ.

    ನಮ್ಮ ಪಾಲುದಾರರಿಗೆ ಒಪ್ಪಿಗೆ ಆಗಿಲ್ಲ ಎಂದರೆ ಅದು ಯಾರಿಗೂ ಒಳಿತಲ್ಲ. ಅದರಿಂದ ಅವರು ಬೆಳೆದು ಯಶಸ್ವಿಯಾಗಲು ಸಾಧ್ಯವಿಲ್ಲ. ಹೀಗಾಗಿ ಭಾರತೀಯ ವ್ಯವಸ್ಥೆಗೆ ನಾವು ಬದ್ಧರಾಗಿದ್ದೇವೆ ಎಂಬುದಾಗಿ ಗೂಗಲ್​ನ ಪ್ರಾಡಕ್ಟ್​ ಮ್ಯಾನೇಜ್​ಮೆಂಟ್​​ನ ವಿಪಿ ಸಮೀರ್​ ಸಾವಂತ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

    ನಮ್ಮ ಪೇಮೆಂಟ್ ಪಾಲಿಸಿ ಹೊಸದೇನಲ್ಲ. ಜಾಗತಿಕವಾಗಿ ಅದು ಜಾರಿ ಇದ್ದು, ಶೇ. 97 ಡೆವೆಲಪರ್ಸ್​ ಅದನ್ನು ಅನುಸರಿಸುತ್ತಿದ್ದಾರೆ. ಅದರಲ್ಲೂ ಡೆವೆಲಪರ್ ಆ್ಯಪ್​ ಡೌನ್​​ಲೋಡ್​ ಮಾಡಿಕೊಳ್ಳುವಾಗ ಚಾರ್ಜ್​ ಮಾಡಿದರೆ ಮಾತ್ರ ಈ ನಿಯಮ ಅನ್ವಯಿಸಬಹುದು ಎಂಬುದಾಗಿ ಹೇಳಿರುವ ಅವರು, ಅಂಥವರ ಸಂಖ್ಯೆ ತೀರಾ ಕಡಿಮೆ ಇರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts