More

    ಕರೊನಾ ಸಂಕಷ್ಟದಲ್ಲೂ ಹೆಚ್ಚಿದ ಉದ್ಯೋಗಾವಕಾಶ; ಭಾರತದಲ್ಲಿ ನೇಮಕಾತಿ ಶೇ.30 ಹೆಚ್ಚಳ

    | ದೇವರಾಜ್ ಎಲ್. ಬೆಂಗಳೂರು

    ಕರೊನಾ ಸಂಕಷ್ಟದಿಂದ ನಿಧಾನವಾಗಿ ದೇಶ ಹೊರಬರುತ್ತಿದ್ದು, ಶೇ.30 ಉದ್ಯೋಗ ನೇಮಕಾತಿ ಚಟುವಟಿಕೆ ಹೆಚ್ಚಳವಾಗಿದೆ. ಶೇ.43 ಉದ್ಯೋಗ ಆಕಾಂಕ್ಷಿಗಳು ಅಮೆರಿಕದಲ್ಲಿ ಉದ್ಯೋಗ ಹುಡುಕಾಟ ನಡೆಸಿದ್ದಾರೆ ಎಂದು ವೃತ್ತಿಪರರ ಸಾಮಾಜಿಕ ಜಾಲತಾಣ ಲಿಂಕ್​ಡಿನ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದರೆ, ಸೆಪ್ಟೆಂಬರ್ ಅವಧಿಯಲ್ಲಿ ಉದ್ಯೋಗ ನೇಮಕಾತಿ ಚಟುವಟಿಕೆಯಲ್ಲಿ ಶೇ.30 ವೃದ್ಧಿಸಿದೆ. ಆಗಸ್ಟ್​ನಲ್ಲಿ ಶೇ.18 ಹೆಚ್ಚಳವಾಗಿತ್ತು. ಜನರು ತಂತ್ರಜ್ಞಾನ ಕ್ಷೇತ್ರದ ಹೊರತಾದ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗವನ್ನು ಬಯಸಿದ್ದಾರೆ.

    ಕರೊನಾ ಕಾಲಿಡುವ ಸಮಯದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸಂಖ್ಯೆ ಶೇ.1.3 ಕಡಿಮೆಯಾಗಿತ್ತು. ಆನಂತರ ಏರಿಕೆ ಕಂಡಿದೆ. ಕರೊನಾದಿಂದ ಕ್ಲಬ್ ಮತ್ತು ಪ್ರವಾಸೋದ್ಯಮ, ಲಾಕ್​ಡೌನ್ ಸಮಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬಾಟಿಕ್ಸ್ ಕ್ಷೇತ್ರದಲ್ಲಿ ಹೆಚ್ಚು ಹೊಡೆತ ಬಿದ್ದಿತ್ತು. ಆದರೆ, ಕಡಿಮೆ ಅವಧಿಯಲ್ಲಿ ಈ ಕ್ಷೇತ್ರ ಚೇತರಿಕೆ ಕಂಡಿತು. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ತಂತ್ರಜ್ಞಾನ ಹೊರತಾದ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ವಿಚಾರ ಖಾಸಗಿ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಖಚಿತವಾಗಿದೆ.

    ವಿದೇಶದಲ್ಲಿ ಹೆಚ್ಚು: ಭಾರತದ ಶೇ.43 ಅಭ್ಯರ್ಥಿಗಳು ವಿದೇಶದಲ್ಲಿನ ಉದ್ಯೋಗವಕಾಶಗಳನ್ನು ಬಯಸಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ಪಡೆಯಲು ಹೆಚ್ಚಿನ ಜನರು ಒಲವು ವ್ಯಕ್ತಪಡಿಸಿದ್ದಾರೆ. ನಂತರದ ಸ್ಥಾನದಲ್ಲಿ ಕೆನಡಾ ಇದೆ. ಯುಎಇ (ಶೇ.17), ಆಸ್ಟ್ರೇಲಿಯಾ (ಶೇ.3) ಇದೆ. ಅತಿ ಹೆಚ್ಚು ಉದ್ಯೋಗ ಹುಡುಕಾಟ ನಡೆಸಿರುವ ಕ್ಷೇತ್ರವನ್ನು ನೋಡಿದಾಗ ಫುಲ್​ಸ್ಟಕ್ ಡೆವಲಪರ್ (ಶೇ.3), ಜಾವ ಡೆವಲಪರ್ (ಶೇ.2.5), ಡೆವಲಪ್​ವೆುಂಟ್ ಇಂಜಿನಿಯರ್ (ಶೇ.2), ಸಾಫ್ಟ್​ವೇರ್ ಇಂಜಿನಿಯರ್ (ಶೇ.2), ಫ್ರಂಟ್ ಎಂಡ್ ಡೆವಲಪರ್ (ಶೇ.2) ಉದ್ಯೋಗವನ್ನು ಪಡೆಯಲು ಅಭ್ಯರ್ಥಿಗಳು ಹೆಚ್ಚು ಉತ್ಸಾಹ ತೋರಿದ್ದಾರೆ.

    ಕರೊನಾ ಸೋಂಕು ಇಳಿಮುಖವಾಗು ತ್ತಿದಂತೆಯೇ ಶೇ.70 ಕೈಗಾರಿಕೆಗಳು ಕಾರ್ಯಚಟುವಟಿಕೆ ಆರಂಭಿಸಿದ್ದು, ಲಾಕ್​ಡೌನ್​ನಲ್ಲಿ ಆಗಿದ್ದ ನಷ್ಟವನ್ನು ಭರಿಸಿಕೊಳ್ಳುತ್ತಿವೆ. ರಫ್ತು ಅವಕಾಶ ಹೆಚ್ಚಿದ್ದು, ಉದ್ಯೋಗಾವಕಾಶಗಳು ಕೂಡ ಹೆಚ್ಚಿವೆ.

    | ಕೆ.ಬಿ.ಅರಸಪ್ಪ ಅಧ್ಯಕ್ಷ, ಕಾಸಿಯಾ

    ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿವೆ. ವಲಸೆ ಕಾರ್ವಿುಕರು ಆಗಮಿಸಬೇಕಿದೆ. ಮುಂದಿನ ಮೂರು ತಿಂಗಳಲ್ಲಿ ಮತ್ತಷ್ಟು ಚೇತರಿಕೆ ಕಾಣಲಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.42 ನಮ್ಮ ರಾಜ್ಯದಲ್ಲಾಗುತ್ತಿರುವುದರಿಂದ ಕೈಗಾರಿಕೋದ್ಯಮಕ್ಕೆ ಇದು ಉತ್ತೇಜನ ನೀಡಲಿದೆ.

    | ಪೆರಿಕಲ್ ಎಂ.ಸುಂದರ್ ಅಧ್ಯಕ್ಷ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್​ಕೆಸಿಸಿಐ)

    ಅಮೆರಿಕಾಕ್ಕೆ ಹೆಚ್ಚು ಏಕೆ?

    ಉದ್ಯೋಗ ಬಯಸುವ ಅಭ್ಯರ್ಥಿಗಳಲ್ಲಿ ಶೇ.43 ಅಮೆರಿಕಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಅಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ ಎಂಬುದು. ಅಲ್ಲದೆ ಅಲ್ಲಿ ಹೆಚ್ಚು ಸ್ವಾತಂತ್ರ್ಯ ದೊರೆಯಲಿದೆ. ಇಲ್ಲಿ ಜಗತ್ತಿನ ಬಹುತೇಕ ಉದ್ಯಮಿಗಳ ಪರಿಚಯವಾಗಲಿದ್ದು, ವ್ಯಾಪಾರ ವೃದ್ಧಿಗೂ ಅನುಕೂಲವಾಗಲಿದೆ. ಅಲ್ಲದೆ ಇಲ್ಲಿನ ಪ್ರವಾಸಿತಾಣಗಳು, ಹವಾಗುಣ ವೃತ್ತಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ. ಅಮೆರಿಕಾದಲ್ಲಿ ಉದ್ಯೋಗ ಮಾಡಿದ್ದರೆ, ವೃತ್ತಿ ಜೀವನಕ್ಕೂ ಅನುಕೂಲಕರವಾಗಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts