More

    ಕುಸಿದ ರೂಪಾಯಿ ಮೌಲ್ಯ: ಅಲ್ಪ ಏರಿಕೆ ಕಂಡಿತು ಚಿನ್ನ, ಬೆಳ್ಳಿ ದರ

    ನವದೆಹಲಿ: ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ದರ ಕುಸಿದ ಕಾರಣ ಚಿನ್ನ, ಬೆಳ್ಳಿ ದರಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏರಿಕೆ ಕಂಡಿವೆ.

    ಎಚ್​ಡಿಎಫ್​ಸಿ ಸೆಕ್ಯುರಿಟೀಸ್​ ದತ್ತಾಂಶ ಪ್ರಕಾರ, 10 ಗ್ರಾಂ ಅಪರಂಜಿಯ ದರ 38 ರೂಪಾಯಿ ಹೆಚ್ಚಾಗಿದ್ದು 39,892 ರೂಪಾಯಿ ತಲುಪಿದೆ. ಹೊಸ ವರ್ಷದ ಮೊದಲ ದಿನ ಚಿನ್ನದ ಬೆಲೆ 10 ಗ್ರಾಂಗೆ 39,854 ರೂಪಾಯಿ ಆಗಿತ್ತು. ಒಂದು ಕಿಲೋ ಬೆಳ್ಳಿಯ ಬೆಲೆ 21 ರೂಪಾಯಿ ಏರಿಕೆಯಾಗಿದ್ದು, 47,781 ರೂಪಾಯಿ ತಲುಪಿದೆ. ನಿನ್ನೆ ಒಂದು ಕಿಲೋ ಬೆಳ್ಳಿಯ ದರ 47,760 ರೂಪಾಯಿ ಇತ್ತು.

    ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್​ಗೆ 1,520 ಡಾಲರ್​ ಮತ್ತು ಬೆಳ್ಳಿಯ ದರ ಒಂದು ಔನ್ಸ್​ಗೆ 17.85 ಡಾಲರ್ ಆಗಿತ್ತು. ಇನ್ನು ರೂಪಾಯಿ ದರ ಅಮೆರಿಕನ್ ಡಾಲರ್ ಎದುರು 11 ಪೈಸೆ ಕುಸಿದು 71.33ರಲ್ಲಿ ವಹಿವಾಟು ಮುಕ್ತಾಯವಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts