More

    ವೃದ್ಧೆಯ ನಂಬಿಸಿ ಚಿನ್ನ ಎಗರಿಸಿದ

    ಬಂಟ್ವಾಳ: ಕೋವಿಡ್‌ನ ಪರಿಹಾರ ಹಣ ಬಂದಿದೆ ಎಂದು ಬಿ.ಸಿ.ರೋಡ್‌ನಲ್ಲಿ ಸೋಮವಾರ ಬೆಳಗ್ಗೆ ವೃದ್ಧ ಮಹಿಳೆಯನ್ನು ನಂಬಿಸಿ ಚಿನ್ನದ ಒಡವೆಯನ್ನು ಯುವಕನೊಬ್ಬ ಎಗರಿಸಿದ್ದಾನೆ. ಮಿನಿ ವಿಧಾನಸೌಧದಲ್ಲಿ ಘಟನೆ ನಡೆದಿದ್ದು, ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ವಂಚನೆಗೊಳಗಾದವರು.

    ಜಯಂತಿ ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಸಿ ಮರಳುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಪರಿಚಯ ಮಾಡಿಕೊಂಡು, ನಾನು ಶೀನಪ್ಪ ಅವರ ಮಗ ಸಂತೋಷ ಎಂದು ನಂಬಿಸಿದ್ದ. ನಿಮಗೆ ಕೋವಿಡ್‌ನಿಂದಾಗಿ ಒಂದೂವರೆ ಲಕ್ಷ ರೂ. ಪರಿಹಾರ ಬಂದಿದೆ. ಅದನ್ನು ಪಡೆಯಲು ಕನಿಷ್ಠ 10 ಸಾವಿರ ರೂ. ಕಟ್ಟಬೇಕಾಗುತ್ತದೆ ಎಂದು ಹೇಳಿದ್ದ. ನೀವು ಮಿನಿ ವಿಧಾನಸೌಧಕ್ಕೆ ಬನ್ನಿ, ಅಲ್ಲಿ ಅರ್ಜಿ ನೀಡಬೇಕು ಎಂದು ಕರೆದುಕೊಂಡು ಹೋಗಿ, ‘ಹಣದ ವಿಚಾರವನ್ನು ನಿಮ್ಮ ಮಗನಲ್ಲಿ ಫೋನ್‌ನಲ್ಲಿ ಮಾತನಾಡಿದೆ. ಅವನಲ್ಲೂ ಹಣ ಇಲ್ಲವಂತೆ. ನಿಮ್ಮಲ್ಲಿರುವ ಕಿವಿಯ ಬೆಂಡೋಲೆಯನ್ನು ಕೊಡುವಂತೆ ಹೇಳಿದ್ದಾನೆ’ ಎಂದು ನಂಬಿಸಿದ್ದಾನೆ. ಅದರಂತೆ ವೃದ್ಧೆ ಚಿನ್ನ ಕೊಟ್ಟಿದ್ದು, ಅಲ್ಲಿಂದ ವ್ಯಕ್ತಿ ಕಾಲ್ಕಿತ್ತಿದ್ದಾನೆ.

    ಮೋಸ ಹೋದ ಮಹಿಳೆ ಮಿನಿ ವಿಧಾನಸೌಧದ ಕಚೇರಿಯ ಮಹಿಳಾ ಸಿಬ್ಬಂದಿ ಮೂಲಕ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪುತ್ರ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಸಿ.ಸಿ. ಕ್ಯಾಮರಾ ಸಹಾಯದಿಂದ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts