More

    ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಯುವಕನಿಗೆ ಏಳು ವರ್ಷ ಶಿಕ್ಷೆ

    ಶಿವಮೊಗ್ಗ: ಭದ್ರಾವತಿ ತಾಲೂಕಿನ ಬಾಳೇಮಾರನಹಳ್ಳಿಯಲ್ಲಿ ಮನೆ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಚಿನ್ನದ ಸರ ಮತ್ತು ಬೆಳ್ಳಿಯ ಕರಡಗಿಯನ್ನು ಕಿತ್ತು ಪರಾರಿಯಾಗಿದ್ದ ಯುವಕನಿಗೆ ಶಿವಮೊಗ್ಗದ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಭದ್ರಾವತಿ ಪೀಠಾಸೀನವು ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
    ತಿಮ್ಲಾಪುರದ ಜಯನಾಯ್ಕ್ ಅಲಿಯಾಸ್ ಸುನೀಲ್(23) ಶಿಕ್ಷೆಗೆ ಒಳಾಗದ ಯುವಕ. ಈತ 2019ರ ಫೆ.10ರಂದು ಸಂಜೆ ಬಾಳೇಮಾರನಹಳ್ಳಿ ಗ್ರಾಮದ ಮಹಿಳೆ ತಮ್ಮ ಮನೆ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿರುವಾಗ ಹಿಂಬದಿಯಿಂದ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಬೆಳ್ಳಯ ಕರಡಿಗೆ ಕಿತ್ತುಕೊಂಡು ಆಕೆಯನ್ನು ತಳ್ಳಿ ಬೀಳಿಸಿ ಓಡಿ ಹೋಗಿದ್ದ.
    ಈ ಬಗ್ಗೆ ಭದ್ರಾವತಿ ಪೇಪರ್‌ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಂದಿನ ತನಿಖಾಧಿಕಾರಿಯಾಗಿದ್ದ ಭದ್ರಾವತಿ ಗ್ರಾಮಾಂತರ ವೃತ್ತದ ಸಿಪಿಐ ಕೆ.ಎಂ.ಯೋಗೇಶ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸೋಮವಾರ ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಧೀಶ ಶಶಿಧರ್ ಅವರು, ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಜಯನಾಯ್ಕ್ಗೆ ಕಠಿಣ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts