More

    ಹಂಗರಗಿ ಕ್ರಾಸ್‌ನಲ್ಲಿ ಸ್ಟಡ್ಸ್ ಅಳವಡಿಕೆ

    ಗೊಳಸಂಗಿ: ಭಾನುವಾರ ನಡೆದ ಅಪಘಾತದಲ್ಲಿ ಮೂವರ ದುರ್ಮರಣದ ನಂತರ ಎಚ್ಚೆತ್ತುಕೊಂಡ ಸದ್ಭವ ಇಂಜನಿಯರಿಂಗ್ ಪ್ರೈ.ಲಿ. ಕಂಪನಿ ರಾಷ್ಟ್ರೀಯ ಹೆದ್ದಾರಿ-50ರ ಹಂಗರಗಿ ಕ್ರಾಸ್‌ನಲ್ಲಿ ರಸ್ತೆ ಸುರಕ್ಷತಾ ಕ್ರಮಕ್ಕೆ ಸೋಮವಾರ ಮುಂದಾಗಿದೆ.
    ಚತುಷ್ಪಥ ರಸ್ತೆ ನಿರ್ಮಾಣಗೊಂಡು ದಶಕ ಕಳೆದರೂ ಹಂಗರಗಿ ಕ್ರಾಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಳಿ ಪಟ್ಟಿ (ಥರ್ಮಾಪ್ಲಾಸ್ಟ್) ಗಳು ಇರಲಿಲ್ಲ. ಜತೆಗೆ ರಸ್ತೆಗೆ ಉಬ್ಬು (ಹಂಪ್ಸ್) ಬದಲಾಗಿ ಅಳವಡಿಸಲಾಗುವ ಇಂಡಿಕೆಟರ್ (ಸ್ಟಡ್ಸ್) ಗಳೂ ಇರಲಿಲ್ಲ. ರಸ್ತೆ ವಿಭಜಕಗಳಿಗೆ ಬಳಿಯಲಾಗಿದ್ದ ಬಿಳಿ ಮತ್ತು ಕಪ್ಪು ಪಟ್ಟಿ ಬಣ್ಣ ಮಾಸಿ ಹೋಗಿತ್ತು. ಭಾನುವಾರ ಘಟನೆ ಬಳಿಕ ಸೋಮವಾರ ಬೆಳಗಾಗುತ್ತಿದ್ದಂತೇ ಸದ್ಭವ ಇಂಜನೀಯರಿಂಗ್ ಪ್ರೈ.ಲಿ. ಕಂಪನಿ ಇವೆಲ್ಲವನ್ನೂ ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.
    ಥರ್ಮಾಪ್ಲಾಸ್ಟ್ ಮತ್ತು ಸ್ಟಡ್ಸ್ ಹೆದ್ದಾರಿಗೆ ಅಳವಡಿಸುವುದರಿಂದ ವೇಗವಾಗಿ ಬರುವ ವಾಹನಗಳ ಚಾಲಕರಿಗೆ ಮುನ್ನೆಚ್ಚರಿಕೆ ನೀಡಲು ಸಹಕಾರಿಯಾಗುತ್ತದೆ ಮತ್ತು ಆಕಸ್ಮಿಕ ದುರಂತಗಳನ್ನು ತಪ್ಪಿಸಲು ಸಾಧ್ಯವಾಗಲಿದೆ. ಏತನ್ಮಧ್ಯೆ ಸೋಮವಾರ ಮೋಟಾರು ವಾಹನ ನಿರೀಕ್ಷಕ (ಆರ್‌ಟಿಒ) ನಾಗರಾಜ ಸೊರಗಿ, ಬಸವನಬಾಗೇವಾಡಿ ಸಿಪಿಐ ಸೋಮಶೇಖರ ಜುಟ್ಟಲ, ಅಭಿಯಂತರ ಜಿ.ಸಿ. ವಂದಾಲ ಭಾನುವಾರ ನಡೆದ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ರಾಷ್ಟ್ರೀಯ ಹೆದ್ದಾರಿ-50ರ ಹಂಗರಗಿ ಕ್ರಾಸ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ನ್ಯಾಷನಲ್ ಹೈವೇ ಅಥಾರಿಟಿ ಇಂಡಿಯಾಗೆ ಪತ್ರ ಬರೆಯಲಾಗಿದೆ. ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗೊಂದು ವೇಳೆ ಮಂಜೂರಾತಿ ದೊರೆತರೆ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಲಾಗುವುದು.
    ಬಸವರಾಜ ಸೊಲ್ಲಾಪುರೆ, ವ್ಯವಸ್ಥಾಪಕ, ಬಿಎಚ್‌ಟಿಪಿಎಲ್ ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts