More

    ಪಕ್ಷನಿಷ್ಠರಿಗೆ ಬಿಜೆಪಿ ತವರುಮನೆ

    ಗೊಳಸಂಗಿ: ಪಕ್ಷದ ಹಿತಕ್ಕಾಗಿ ದುಡಿದವರನ್ನು ಬಿಜೆಪಿ ಯಾವತ್ತೂ ಕೈ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಒಂದರ್ಥದಲ್ಲಿ ಪಕ್ಷನಿಷ್ಠರಿಗೆ ಬಿಜೆಪಿ ತವರುಮನೆ ಇದ್ದ ಹಾಗೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಪಕ್ಷದ ಗುಣಗಾನ ಮಾಡಿದರು.

    ಸಮೀಪದ ಕೂಡಗಿ ಎನ್‌ಟಿಪಿಸಿ ಬಳಿಯ ಅರವಿಂದ ಹತ್ತರಕಿಹಾಳ ಅವರ ತೋಟದ ಮನೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಸವನ ಬಾಗೇವಾಡಿ ಬಿಜೆಪಿ ಮಂಡಲ ಒಬಿಸಿ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು.

    1950 ರಲ್ಲಿ ಜನಸಂಘದ 1500 ಸದಸ್ಯರ ಮೂಲಕ ಆರಂಭಗೊಂಡು ಇಂದು ಇಡೀ ದೇಶವ್ಯಾಪಿ ಕೋಟ್ಯಂತರ ಕಾರ್ಯಕರ್ತರ ಪಡೆಯೊಂದಿಗೆ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ ಎಂದು ಪಕ್ಷ ನಡೆದು ಬಂದ ದಾರಿಯನ್ನು ಮೆಲಕು ಹಾಕಿದ ಬೆಳ್ಳುಬ್ಬಿ, ಚುನಾವಣೆ ಆಯೋಗ ಯಾವುದೇ ಕ್ಷಣದಲ್ಲಿ ತಾಪಂ, ಜಿಪಂ ಚುನಾವಣೆಯ ಘೋಷಿಸಬಹುದು. ನಮ್ಮ ಕಾರ್ಯಕರ್ತರು ಮುಂಬರುವ ಚುನಾವಣೆಯಲ್ಲಿ ಪಕ್ಷ ಸೂಚಿಸುವ ಅಭ್ಯರ್ಥಿಗಳ ಗೆಲುವೊಂದನ್ನೇ ಗುರಿಯನ್ನಾಗಿಸಿಕೊಂಡು ಕೆಲಸ ಮಾಡಬೇಕು ಎಂದರು.

    ಮಂಡಲದ ಅಧ್ಯಕ್ಷ ಶಂಕರಗೌಡ ಪಾಟೀಲ, ಹಿಂದುಳಿದ ವರ್ಗದ ಅಧ್ಯಕ್ಷ ಸಂಭು ಮಾಶಾಳ, ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ, ಒಬಿಸಿ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ರಾಯಗೊಂಡ ಮಾತನಾಡಿದರು.

    ಪ್ರಮುಖರಾದ ಸಿದ್ರಾಮ ಕಾಖಂಡಕಿ, ಹನುಮಂತರಾಯ ಗುಡದಿನ್ನಿ, ಮಲ್ಲು ಸೇಬಗೊಂಡ, ಮುದಕಣ್ಣ ಹೊರ್ತಿ, ಮೌನೇಶ ಪತ್ತಾರ, ವಿರೂಪಾಕ್ಷ ಬಡಿಗೇರ, ಶ್ರೀಶೈಲ ಹಾದಿಮನಿ, ಅರವಿಂದ ಹತ್ತರಕಿಹಾಳ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts