More

    ನೆಮ್ಮದಿ ಬದುಕಿಗೆ ದೇವರ ಕೃಪೆ ಅವಶ್ಯ

    ಬಸವನಬಾಗೇವಾಡಿ: ಜಗತ್ತಿನ ಪ್ರತಿಯೊಂದು ಜೀವರಾಶಿಗಳು ಸುಖ ಶಾಂತಿ ನೆಮ್ಮದಿಯಿಂದ ಬಾಳಿ ಬದುಕಲು ದೇವರ ಕೃಪೆ ಅವಶ್ಯವಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

    ಪಟ್ಟಣದಲ್ಲಿ ಗೌರಿಶಂಕರ ಜಾತ್ರಾ ಮಹೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಮುಕ್ತಾಯ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಜಾತ್ರೆ ಉತ್ಸವ, ಪ್ರವಚನಗಳ ಮೂಲಕ ದೇವರ ಲೀಲೆ ಗೊತ್ತಾಗುತ್ತದೆ. ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ ನಾವು ಏನಾದರು ಸಾಧನೆ ಮಾಡಬೇಕಾದರೆ ದೇವರ ಕೃಪೆಯಿರಬೇಕು. ಅಂದಾಗ ಮಾತ್ರ ಆ ಸಾಧನೆ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಪ್ರಕೃತಿಯನ್ನು ಪ್ರತಿಯೊಬ್ಬರು ಪೂಜಿಸಬೇಕು. ಪ್ರಕೃತಿ ಮುನಿಸಿಕೊಂಡರೆ ಜಗತ್ತಿನ ಯಾವ ಜೀವರಾಶಿಯೂ ಬದುಕಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಕೃತಿಯನ್ನು ಪೂಜಿಸಬೇಕು ಎಂದರು.

    ಪಟ್ಟಣದ ವಿರಕ್ತಮಠ ಸಿದ್ಧಲಿಂಗ ಶ್ರೀಗಳು, ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಪ್ರವಚನಕಾರ ಘಟಪ್ರಭಾ ವಿರಕ್ತಮಠದ ಚನ್ನದೇವರು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯ ರವಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಕಾಳಹಸ್ತೇಶ್ವರಮಠ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ಸಂಗನಗೌಡ ಚಿಕ್ಕೊಂಡ, ಅಶೋಕ ಗುಳೇದ, ಡಾ. ಕರುಣಾಕರ ಚೌಧರಿ, ಶಿವರಾಜಸಿಂಗ್ ರಜಪೂತ, ಶಂಕರಗೌಡ ಬಿರಾದಾರ, ಬಸವರಾಜ ಕೋಟಿ, ಮುದುಕಪ್ಪ ಕುಳಗೇರಿ, ಶ್ರೀಕಾಂತ ಪಡಶೆಟ್ಟಿ, ರುದ್ರಯ್ಯ ಮಠಪತಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ, ಪ್ರಕಾಶ ಪಡಶೆಟ್ಟಿ, ಮಲ್ಲು ಬೋರಗಿ, ಶಾಂತಪ್ಪ ನಾಕ್ಯೋಡಿ, ಚೇತನ ಮಠಪತಿ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts