More

    ಶೇ. 99.3 ರಷ್ಟು ಮರ ಕಡಿಯುವ ಅರ್ಜಿಗಳಿಗೆ ಹಸಿರು ನಿಶಾನೆ; ಇದು ಗೋವಾದ ವೃಕ್ಷ ಪ್ರಾಧಿಕಾರಗಳ ಕಾರ್ಯವೈಖರಿ !

    ಪಣಜಿ : ಮರಗಳ ರಕ್ಷಣೆಗಾಗಿ ಸ್ಥಾಪಿಸಲಾಗಿರುವ ಗೋವಾದ ವೃಕ್ಷ ಪ್ರಾಧಿಕಾರವು ಕಳೆದ ಹತ್ತು ವರ್ಷಗಳಲ್ಲಿ, ಮರ ಕಡಿಯುವುದಕ್ಕಾಗಿ ಸಲ್ಲಿಸಿದ ಅರ್ಜಿಗಳಲ್ಲಿ ಶೇಕಡ 99.3 ರಷ್ಟಕ್ಕೆ ಅನುಮತಿ ನೀಡಿದೆ. ತನ್ಮೂಲಕ 77,000 ಮರಗಳ ಅಳಿವಿಗೆ ಕಾರಣವಾಗಿದೆ ಎಂದು ಲಿವಿಂಗ್ ಹೆರಿಟೇಜ್ ಫೌಂಡೇಶನ್ ಸಂಸ್ಥೆ ಬಾಂಬೆ ಹೈಕೋರ್ಟ್​ನ ಗೋವಾ ನ್ಯಾಯಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

    ಗೋವಾ ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಜನವರಿ 2010 ರಿಂದ ಜೂನ್ 2019 ರವರೆಗೆ 88,978 ಮರಗಳನ್ನು ಕಡಿಯಲು ಅನುಮತಿ ಕೋರಿ 4,041 ಅರ್ಜಿಗಳನ್ನು ಅರಣ್ಯ ಇಲಾಖೆಯ ಮುಂದೆ ಸಲ್ಲಿಸಲಾಗಿತ್ತು. ಇವುಗಳಲ್ಲಿ 2,537 ಅರ್ಜಿಗಳನ್ನು ಅನುಮೋದಿಸಿದ್ದು, ಕೇವಲ 19 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸುಮಾರು 1,444 ಅರ್ಜಿಗಳು ಪೆಂಡಿಂಗ್ ಇವೆ ಎನ್ನಲಾಗಿದೆ.

    ಇದನ್ನೂ ಓದಿ: ‘ಮಹಾ’ ಸರ್ಕಾರಕ್ಕೆ ಸಂಕಷ್ಟ: ಸಿಬಿಐ ತನಿಖೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್​

    ಹೀಗೆ ಒಟ್ಟು ಮರ ಕಡಿಯಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳಲ್ಲಿ ಶೇ. 0.3 ರಷ್ಟನ್ನು ಮಾತ್ರ ವೃಕ್ಷ ಪ್ರಾಧಿಕಾರ ತಿರಸ್ಕರಿಸಿದೆ. ಉಳಿದಂತೆ ಮರ ಕಡಿಯಲು ಪೂರ್ಣ ಅನುಮತಿ ನೀಡಿದ್ದು, ಮರ ಕಡಿದ ಅರ್ಜಿದಾರರು ನಂತರ ಹೊಸ ಮರಗಳನ್ನು ಬೆಳೆಸುವುದಕ್ಕಾಗಿ ರೀಪ್ಲಾಂಟೇಷನ್​ ಮಾಡುತ್ತಿದ್ದಾರೆಯೇ ಎಂದೂ ಗಮನ ವಹಿಸಿಲ್ಲ. ಕೇವಲ 13,000 ಸಸಿಗಳನ್ನು ನೆಟ್ಟಿರುವ ಬಗ್ಗೆ ದಾಖಲೆ ಇದೆಯಾದರೂ, ಹಾಗೆ ನೆಟ್ಟ ಸಸಿಗಳು ಮರವಾಗಿ ಬೆಳೆಯುತ್ತಿವೆ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲ. ಕಾನೂನು ರೀತ್ಯ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕಿದ್ದರೂ, ಜನವರಿ 2010 ರಿಂದ ಜೂನ್ 2019 ರವರೆಗೆ ಕೇವಲ 38 ಬಾರಿ ಪ್ರಾಧಿಕಾರದ ಸಭೆಗಳು ನಡೆದಿವೆ. 2012 ರ ನಂತರದಲ್ಲಿ ಒಮ್ಮೆಯೂ ಸಭೆ ಸೇರದೆ ತನ್ನ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಫೌಂಡೇಶನ್ ಹೇಳಿದೆ.

    ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಸ್ವೀಕರಿಸಲಾದ ಮಾಹಿತಿಯನ್ನು ಆಧರಿಸಿ ಸಲ್ಲಿಸಲಾಗಿರುವ ಈ ಪಿಐಎಲ್​ ಮೇಲೆ ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಜಿಲ್ಲೆಯ ವೃಕ್ಷ ಪ್ರಾಧಿಕಾರಗಳಿಗೆ ಹೈಕೋರ್ಟ್ ನೋಟೀಸು ಜಾರಿ ಮಾಡಿದೆ. ಈ ಪ್ರಾಧಿಕಾರಗಳು ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂದು ಮಾಹಿತಿ ನೀಡುವುದರೊಂದಿಗೆ ಮರ ಕಡಿಯಲು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಸ್ಟೇಟಸ್ ರಿಪೋರ್ಟ್​ಅನ್ನು ಏಪ್ರಿಲ್ 28 ರೊಳಗೆ ಸಲ್ಲಿಸಲು ಕೋರ್ಟ್​ ಸೂಚಿಸಿದೆ. (ಏಜೆನ್ಸೀಸ್)

    ಅನುಮತಿ ಇಲ್ಲದೆ ಭಾರತೀಯ ಜಲವಲಯ ಪ್ರವೇಶಿಸಿದ ಅಮೆರಿಕ ನೌಕೆ ! ಸರ್ಕಾರದ ವಿರೋಧ

    ‘ದೆಹಲಿಯಲ್ಲೊಬ್ಬರು ಪಾಳೆಯಗಾರ, ಕರ್ನಾಟಕದಲ್ಲೊಬ್ಬರು ಮಾಂಡಲಿಕ’! ರಾತ್ರಿ ಕರ್ಫ್ಯೂ ನಾಟಕ ಎಂದ ಸಿದ್ದರಾಮಯ್ಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts