More

    ದೇಸಿ ಗೋ ತಳಿ ಉಳಿಸಿಕೊಳ್ಳಲು ಮುಂದಾಗಿ: ಗೋಪಾಲಕೃಷ್ಣ ಬೇಳೂರು

    ಸಾಗರ: ರೈತರು ಉಳುಮೆ ಜತೆಗೆ ಉಪ ಕಸುಬುಗಳ ಬಗ್ಗೆಯೂ ಚಿಂತಿಸಬೇಕು. ಅದರಲ್ಲಿಯೂ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ದೇಸಿ ಗೋತಳಿಗಳನ್ನು ಉಳಿಸಿಕೊಳ್ಳುವಲ್ಲಿ ಚಿಂತಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
    ನಗರದಲ್ಲಿ ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಹಾಗೂ ಶಿವಮೊಗ್ಗ ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಚೇರಿ ಉದ್ಘಾಟಿಸಿ ಮಾತನಾಡಿ, ಮಲೆನಾಡಿನಲ್ಲಿ ಹೈನುಗಾರಿಕೆ ಕಡಿಮೆಯಾಗುತ್ತಿದೆ. ರೈತರಿಗೆ ಹೈನುಗಾರಿಕೆ ಬಹಳ ಮುಖ್ಯ. ಅದರ ಮೂಲಕ ಉತ್ತಮ ಗೊಬ್ಬರವನ್ನೂ ಪಡೆಯಬಹುದು. ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು. ರೈತರಿಗೆ ಅನುಕೂಲವಾದ ಸಂಸ್ಥೆಗಳನ್ನು ಕಟ್ಟಿ, ಸರ್ಕಾರದ ಉಪಯೋಗವನ್ನೂ ಪಡೆದುಕೊಳ್ಳಬೇಕು ಎಂದರು.
    ಇAದು ಒಕ್ಕಲು ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು ಯುವಜನರು ನಗರದ ಕಡೆ ಆಕರ್ಷಿತರಾಗುತ್ತಿದ್ದಾರೆ. ಉಳುಮೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಮಲೆನಾಡು ಗಿಡ್ಡದಂತಹ ದೇಸಿ ತಳಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಇದಕ್ಕೆ ಸಂಘಟನೆಗಳು ಸಹಕಾರ ತತ್ವಗಳ ಅಡಿಯಲ್ಲಿ ಮುನ್ನಡೆಯಬೇಕು ಎಂದರು.
    ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ರೈತರು ಹೊಸ ಆವಿಷ್ಕಾರ, ಪ್ರಯೋಗಗಳಿಗೂ ಹೊಂದಿಕೊಳ್ಳಬೇಕು. ನಮ್ಮ ದೇಸಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಮಲೆನಾಡಿನ ಜನರು ಮಲೆನಾಡು ಗಿಡ್ಡ ಹಸು ಮತ್ತು ಎಮ್ಮೆಯನ್ನು ಒಟ್ಟಿಗೆ ಸಾಕಿಕೊಂಡು ಬಂದವರು. ಹಳ್ಳಿಗಳ ಕೊಟ್ಟಿಗೆ ಮನೆಗಳಲ್ಲಿ ನೂರಾರು ಗೋವುಗಳು ಇರುತ್ತಿದ್ದವು. ಈಗ ಕೊಟ್ಟಿಗೆಗಳು ಬರಿದಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮಲೆನಾಡಿನ ರೈತರು ಕಡ್ಡಾಯವಾಗಿ ಹೈನುಗಾರಿಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
    ರೈತರ ಕೆಲಸಗಳಿಗೆ ಇಂದು ಆಧುನಿಕ ಉಪಕರಣಗಳು ಬಂದಿವೆ. ಅವುಗಳನ್ನು ಬಳಸಿಕೊಂಡು ಇರುವ ಭೂಮಿಯಲ್ಲಿ ಏನಾದರೂ ಉಳುಮೆ ಮಾಡಿ ಪೋಷಿಸಬೇಕು. ದೇಶದ ಆಸ್ತಿಯೇ ರೈತನ ಶ್ರಮ ಎಂಬುದನ್ನು ಮರೆಯಬಾರದು ಎಂದರು.
    ಸAಸ್ಥೆ ಮುಖ್ಯಸ್ಥ ನಾಗೇಂದ್ರ ಸಾಗರ್ ಮಾತನಾಡಿ, ದೇಶದ ಗೋವುಗಳ ಸಾಕಣೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಂಘಟನೆಗಳನ್ನು ಕಟ್ಟಿಕೊಂಡು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಹೈನುಗಾರಿಕೆಯಲ್ಲಿ ಸಾಕಷ್ಟು ಸವಾಲುಗಳಿದ್ದು ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯೂ ಕಡಿಮೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಲೆನಾಡು ಗಿಡ್ಡ ಗೋ ತಳಿಗಳ ಸಗಣಿಯನ್ನು ಬಳಸಿ ಬೆಳೆದ ಹಣ್ಣು ತರಕಾರಿಗಳನ್ನು ಖರೀದಿಸಿ ಅದಕ್ಕೆ ಮಾರುಕಟ್ಟೆ ನಿರ್ಮಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಗೋ ಉತ್ಪನ್ನಗಳ ಬಗ್ಗೆಯೂ ಗಮನಹರಿಸುವುದಾಗಿ ತಿಳಿಸಿದರು.
    ಪಶುಪಾಲನಾ ಮತ್ತು ವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ ಡಾ. ಶಿವಯೋಗಿ ಎಲಿ, ಡಾ. ಉಮಾದೇವಿ, ರಾಧಾಕೃಷ್ಣ ಬಂದಗz್ದೆ, ನಗರಸಭಾ ಸದಸ್ಯ ರವಿ ಉಡುಪ, ಲೋಕರಾಜ್, ಸಂದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts