More

    ದೇಸಿ ಸಂಸ್ಕೃತಿ ಸಂರಕ್ಷಣೆಗೆ ಮುಂದಾಗಿ | ಎಂ.ಬಿ.ಹಂಗರಗಿ ಅಭಿಮತ

    ಗುಳೇದಗುಡ್ಡ: ಸಮಾಜದಲ್ಲಿ ಜಂಗಮ ಸಮಾಜಕ್ಕೆ ಅತ್ಯುನ್ನತ ಸ್ಥಾನವಿದ್ದು, ಅದಕ್ಕೆ ತಕ್ಕಂತೆ ನಾವು ನಮ್ಮ ಸಂಪ್ರದಾಯ, ಸಂಸ್ಕೃತಿ ಕಾಪಾಡಿಕೊಂಡು, ಬೆಳೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದು ಕುಮಾರೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ.ಹಂಗರಗಿ ಹೇಳಿದರು.

    ನಗರದ ಮುರುಘಾಮಠದ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಗುಳೇದಗುಡ್ಡ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರು, ಬಸವೇಶ್ವರರು ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ತಾಲೂಕು ಮಟ್ಟದ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

    ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಉಳಿಸಿಕೊಂಡರೆ ಮಾತ್ರ ನಮ್ಮ ಸಮಾಜ, ನಮ್ಮ ಧರ್ಮ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ವೀರಶೈವ ಹಾಗೂ ಲಿಂಗಾಯತ ಒಟ್ಟುಗೂಡಿದರೆ ರೇಣುಕಾಚಾರ್ಯ ಜಯಂತಿಗೆ ಹೆಚ್ಚಿನ ಮಹತ್ವ ಬರುತ್ತದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಮರುಘಾಮಠದ ಕಾಶೀನಾಥ ಸ್ವಾಮಿಗಳು ಮಾತನಾಡಿ, ನಾವು ಎಷ್ಟೇ ಪದವಿ ಪಡೆದರೂ ನಮ್ಮ ಧರ್ಮ, ಆಚಾರ-ವಿಚಾರಗಳನ್ನು ಮರೆಯಬಾರದು. ಮಾನವೀಯ ಮೌಲ್ಯಗಳಿಂದ ನಡೆಯಬೇಕು. ಸಮಾಜದೊಂದಿಗೆ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕು. ದಾರ್ಶನಿಕರ ಜಯಂತ್ಯುತ್ಸವದ ನೆಪದಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಂಡು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದರು.

    ಶಿವುಪುತ್ರಪ್ಪ ಹಟ್ಟಿ ಶಾಸಿಗಳು ಹಾಗೂ ಶರಣಯ್ಯ ಹಳ್ಳೂರು ಉಪನ್ಯಾಸ ನೀಡಿದರು. ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಶಿವಾನಂದ ಮಳಿಮಠ ಅಧ್ಯಕ್ಷತೆ ವಹಿಸಿದ್ದರು.

    ಮಾಜಿ ಶಾಸಕ ರಾಜಶೇಖರ ಶೀಲವಂತ, ಸಿಪಿಐ ಶರಣಯ್ಯ ವಸದ, ವಿಶ್ವನಾಥ ಹಿರೇಮಠ, ಬಸಯ್ಯ ಭಂಡಾರಿ, ಪ್ರಭುಸ್ವಾಮಿ ಸರಗಣಾಚಾರಿ, ಮಹಾಂತಯ್ಯ ಸರಗಣಾಚಾರಿ, ಉಮಾಶಂಕರ ಶಿವನಗೌಡರ, ಸಂಗಯ್ಯ ಗವಿಮಠ, ಶಿವಕುಮಾರ ಸಾವಳಗಿಮಠ, ಸಿದ್ದಯ್ಯ ರೇವಣಸಿದ್ದೇಶ್ವರಮಠ, ಈರಯ್ಯ ಚನ್ನಸಂಗಯ್ಯನಮಠ, ಪ್ರಭು ತಟ್ಟಿಮಠ, ಜಗದೀಶ ಕಾರಡುಗಿಮಠ, ಸಾವಳಗಯ್ಯ ಸಂಕಿನಮಠ, ಪಡದಯ್ಯ ಕಕ್ಕಯ್ಯನಮಠ, ಚನ್ನಬಸಯ್ಯ ಸಿಂದಗಿಮಠ, ಮುಪ್ಪಯ್ಯ ಗಂಟಿಮಠ, ಜಗದೀಶ ಸರಗಣಾಚಾರಿ, ಸಂಗಯ್ಯ ಹಿರೇಮಠ, ಲಿಂಗಯ್ಯ ಹಿರೇಮಠ, ಜಗದೀಶ ಸಾವಳಗಿಮಠ, ಶ್ರೀಕಾಂತ ಸರಣಾಚಾರಿ, ಶಿವಯ್ಯ ಕಕ್ಕಯ್ಯನಮಠ, ಮರುಳಾರಾಧ್ಯ ಹಿರೇಮಠ, ಚಂದ್ರಶೇಖರ ಪೂಜಾರ, ಅಕ್ಕಮ್ಮ ಶಿವಪ್ಪಯ್ಯನಮಠ, ಗೀತಾ ಸಾರಂಗಮಠ, ದ್ರಾಕ್ಷಾಯಣಿ ಸಿಂದಗಿಮಠ, ದೀಪಾ ಸರಗಣಾಚಾರಿ, ಚನ್ನಮ್ಮ ತಟ್ಟಿಮಠ, ನೀಲಮ್ಮ ಚನ್ನಸಂಗಯ್ಯನಮಠ, ಗಿರಿಜಾ ಕಿರಸೂರಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts