More

    ಜಿಎಂಐಟಿಯಲ್ಲಿ 3 ಕೌಶಲ ತರಬೇತಿ ಕೇಂದ್ರಕ್ಕೆ ಚಾಲನೆ ಇಂದು

    ದಾವಣಗೆರೆ: ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಂತ್ರಿಕ ಶಿಕ್ಷಣದ ಜತೆ ಸ್ವ ಉದ್ಯೋಗಕ್ಕೆ ಪೂರಕ ಮೂರು ವಿಷಯಾಧಾರಿತ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ಡಾ.ವೈ. ವಿಜಯಕುಮಾರ್ ಹೇಳಿದರು.

    ಅಸಂಪ್ರದಾಯಕ ಇಂಧನ ಮೂಲ, ಜೈವಿಕ ಇಂಧನ ಉತ್ಪಾದನಾ ಕೇಂದ್ರ ಹಾಗೂ ವೈಮಾನಿಕ ಕೌಶಲ ತರಬೇತಿ ಕೇಂದ್ರಗಳು ಫೆ.8 ರಿಂದ ಕಾರ್ಯಾರಂಭ ಮಾಡಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಫೆ. 8ರ ಬೆಳಗ್ಗೆ 11ಕ್ಕೆ ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ವಿಟಿಯು ಸಂಸ್ಥಾಪಕ ಕುಲಪತಿ ಡಾ.ಎಸ್. ರಾಜಶೇಖರಯ್ಯ, ಕೆಪಿಸಿಎಲ್ ಎನ್‌ಟಿಸಿಎಸ್‌ಟಿ ವಿಶ್ರಾಂತ ನಿರ್ದೇಶಕ ಡಾ.ಎಚ್. ನಾಗನಗೌಡ, ಸ್ಕೈಬರ್ಡ್ ಏವಿಯೇಷನ್ ಸಿಇಒ ಎಸ್. ಮನೋಹರ್, ಕಾಲೇಜಿನ ಗೌರ್ನಿಂಗ್ ಕೌನ್ಸಿಲ್‌ನ ಡಾ.ಕೆ. ದಿವ್ಯಾನಂದ, ಕಾಲೇಜಿನ ಚೇರ‌್ಮನ್ ಜಿ.ಎಂ. ಲಿಂಗರಾಜು ಭಾಗವಹಿಸುವರು ಎಂದರು. ಉಪ ಪ್ರಾಚಾರ್ಯ ಡಾ.ಬಿ.ಆರ್. ಶ್ರೀಧರ್, ಡಾ. ರಾಜ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts