More

    ವೈಭವದ ಶ್ರೀನಿವಾಸ ಕಲ್ಯಾಣೋತ್ಸವ:ಶ್ರೀನಿವಾಸನಗರದಲ್ಲಿ ಕರುನಾಡ ಸಂಭ್ರಮ

    ಬೆಂಗಳೂರು: ಗೆಲುವು ಕನ್ನಡ ಗೆಳೆಯರ ಸಮಿತಿ ಹಾಗೂ ಜಿಕೆಜಿಎಸ್ ಚಾರಿಟಬಲ್ ಟ್ರಸ್ಟ್‌ಗಳು ‘ವಿಜಯವಾಣಿ’ ಸಹಯೋಗದೊಂದಿಗೆ ಶ್ರೀನಿವಾಸನಗರದ ಶಂಕರ್‌ನಾಗ್ ವೃತ್ತ ಸಮೀಪದ ಕೆಂಪೇಗೌಡ ಆಟದ ಮೈದಾನದಲ್ಲಿ ಆಯೋಜಿಸಿರುವ ‘ಕರುನಾಡ ಸಂಭ್ರಮ’ದ 2ನೇ ದಿನ ‘ಶ್ರೀನಿವಾಸ ಕಲ್ಯಾಣೋತ್ಸವ’ ವೈಭವದಿಂದ ನೆರವೇರಿತು.

    ಶ್ರೀನಿಧಿ ಕಮಲೇಶ್ ಶಾಸಿ ಮತ್ತು ತಂಡದವರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು. ವಿವಾಹಕ್ಕೆ ಸಂಬಂಧಿಸಿದ ಕಾಶಿಯಾತ್ರೆ ಪಾದಪೂಜೆ, ಜೀರಿಗೆ ಬೆಲ್ಲಶಾಸ, ಅಕ್ಷತಾರೋಪಣ, ಪುಣ್ಯಪ್ರಾಪ್ತಿಗಾಗಿ ಧಾರೆ, ವಿಶ್ವ ಕಲ್ಯಾಣಕ್ಕಾಗಿ ಮಾಂಗಲ್ಯಧಾರಣೆ, ಮಾನವ ಜನಾಂಗದ ಅನ್ಯೋನ್ಯತೆಗಾಗಿ ವಾಜಹೋಮ, ಲಪೂಜೆ, ಅಷ್ಟಾವಧಾನ ಸೇವೆಯನ್ನು ಅಲಂಕೃತ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು.ಇದಕ್ಕೂ ಮುನ್ನ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಮೈದಾನದಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿರುವ ದೇವಸ್ಥಾನದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ಸುತ್ತಮುತ್ತ ಬಡಾವಣೆಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗಿಯಾದರು.

    ನಾಡಿನ ಒಳಿತಿಗಾಗಿ ಪ್ರತಿವರ್ಷವು ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಅದ್ದೂರಿಯಾಗಿ ನೆರವೇರಿಸಲಾಯಿತು. ತಿರುಪತಿಯಿಂದ ಲಾಡುಗಳನ್ನು ತಂದು ಭಕ್ತಾದಿಗಳಿಗೆ ಪ್ರಸಾದ ನೀಡಲಾಯಿತು ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ ಹೇಳಿದರು. ಉತ್ಸವ ನಡೆಸಿಕೊಟ್ಟ ಶ್ರೀನಿಧಿ ಕಮಲೇಶ್ ಶಾಸಿ ಅವರನ್ನು ಸಮಿತಿ ಅಭಿನಂದಿಸಿತು. ಟ್ರಸ್ಟ್ ಗೌರವಾಧ್ಯಕ್ಷ ಡಿ. ಶಿವಲಿಂಗೇಗೌಡ, ಸಂಸ್ಥಾಪಕ ಎಲ್.ಎನ್. ಆನಂದ್, ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಪ್ರಶಾಂತ್, ಉಪಾಧ್ಯಕ್ಷ ಡಿ.ಎನ್. ರಮೇಶ್ ಇದ್ದರು. ಕಾರ್ಯಕ್ರಮವನ್ನು ರಾಜ್ ಇವೆಂಟ್ಸ್ ಆಯೋಜನೆ ಮಾಡಿದೆ.

    ಇದನ್ನೂ ಓದಿ:ಒಂದು ಜಿರಳೆ ಕೊಲ್ಲಲು ಹೋಗಿ ಮನೆಯನ್ನೇ ಸ್ಫೋಟಿಸಿದ!

    ಇಂದು ಸಂಗೀತ ಸಂಜೆ
    ‘ಕರುನಾಡ ಸಂಭ್ರಮ’ದಲ್ಲಿ ಶನಿವಾರ (ಡಿ.16) ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ ಸಂಗೀತ ಸಂಜೆ, ಕಿರುತರೆ ನಟ-ನಟಿಯರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಹಿರಿಯ ನಟಿ ಗಿರಿಜಾ ಲೋಕೇಶ್‌ಗೆ ‘ಕರುನಾಡ ಸಂಭ್ರಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. 17ರಂದು ಗಾಯಕರಾದ ರಾಜೇಶ್ ಕೃಷ್ಣನ್, ನವೀನ್ ಸಜ್ಜು ತಂಡದಿಂದ ಸಂಗೀತ ಸಂಜೆ ಹಾಗೂ ಕಿರುತರೆ ನಟ-ನಟಿಯರಿಂದ ನೃತ್ಯ ಜರುಗಲಿದೆ. ನಟ ರಮೇಶ್ ಅರವಿಂದ್‌ಗೆ ‘ಕನ್ನಡ ಕಲಾಭೂಷಣ’ ಬಿರುದು ನೀಡಿ ಸನ್ಮಾನಿಸಲಾಗುವುದು. ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದರಾದ ಡಿ.ಕೆ. ಸುರೇಶ್, ತೇಜಸ್ವಿ ಸೂರ್ಯ, ನಟರಾದ ಸತೀಶ್ ನೀನಾಸಂ, ಚಿಕ್ಕಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts