More

    3000 ಗಡಿ ದಾಟಿದ ಜಾಗತಿಕವಾಗಿ ಕೊರೊನಾ ವೈರಸ್​ಗೆ ಮೃತಪಟ್ಟವರ ಸಂಖ್ಯೆ: 60ಕ್ಕೂ ಹೆಚ್ಚು ದೇಶಗಳಲ್ಲಿ ಸೋಂಕು

    ಬೀಜಿಂಗ್​(ಚೀನಾ): ಮಾರಕ ಕೊರೊನಾ ವೈರಸ್​ಗೆ ಜಾಗತಿಕವಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 3000 ಗಡಿಯನ್ನು ದಾಟಿದ್ದು, ಚೀನಾದಲ್ಲೇ 42 ಹೊಸ ಸಾವಿನ ಪ್ರಕರಣಗಳನ್ನು ದಾಖಲಾಗಿದೆ.

    ಚೀನಾವೊಂದರಲ್ಲೇ 2,912 ಮಂದಿ ಈವರೆಗೆ ಕೊರೊನಾ ವೈರಸ್​ಗೆ ಬಲಿಯಾಗಿರುವುದಾಗಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ಬೆಳಗ್ಗೆ ಮಾಹಿತಿ ನೀಡಿದೆ.

    ಈ ಕಳವಳಕಾರಿ ಸುದ್ದಿಯ ನಡುವೆ ಖುಷಿಯ ವಿಚಾರವೆಂದರೆ ಕೊರೊನಾ ವೈರಸ್ ಸೋಂಕು​ ಪ್ರಕರಣಗಳು ದಿನೇ ದಿನೇ ತುಂಬಾ ಕಡಿಮೆಯಾಗಿದೆ. ಹುಬೇ ಹೊರಭಾಗದಲ್ಲಿ ಕೇವಲ 6 ಪ್ರಕರಣಗಳು ಮಾತ್ರ ದಾಖಲಾಗಿವೆ. ಇನ್ನು 60 ದೇಶಗಳಿಗೆ ಮಾರಕ ವೈರಸ್​ ಹರಡಿದೆ.

    ಕೊರೊನಾ ವೈರಸ್​ ಕಳೆದ ವರ್ಷ ಡಿಸೆಂಬರ್​ನಲ್ಲಿ ಕೇಂದ್ರ ಚೀನಾದ ಹುಬೇ ಪ್ರಾಂತ್ಯದ ವುಹಾನ್​ ನಗರದಲ್ಲಿ ಸ್ಫೋಟಗೊಂಡಿತ್ತು. ಅದರಲ್ಲೂ ಜೀವಂತ ಪ್ರಾಣಿ ಮಾರುಕಟ್ಟೆಯಿಂದ ಹರಡಿತ್ತು ಎಂದು ಹೇಳಲಾಗಿದೆ.

    ಯುಎಸ್​, ಆಸ್ಟ್ರೇಲಿಯಾದಲ್ಲಿ ಕಳೆದ ವೀಕೆಂಡ್​ನಲ್ಲಿ ಮೊದಲ ಸಾವಿನ ಪ್ರಕರಣಗಳು ವರದಿಯಾಗಿದೆ. ಕಳೆದ 48 ಗಂಟೆಗಳಲ್ಲಿ ಯುರೋಪ್​ ದೇಶ ಇಟಲಿಯಲ್ಲಿ ವೈರಸ್​ ಸೋಂಕಿತರ ಪ್ರಮಾಣ ದ್ವಿಗುಣವಾಗಿದೆ.

    ವಯಸ್ಸಾಗಿ ಇತರೆ ಅನಾರೋಗ್ಯದಿಂದ ದುರ್ಬಲಗೊಂಡಿರುವ 60ರ ವಯೋಮಾನದವರ ಮೇಲೆ ಕೊರೊನಾ ವೈರಸ್​ ಹೆಚ್ಚಾಗಿ ಪರಿಣಾಮ ಬೀರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವೈರಸ್​ ತಗುಲಿದ ಅನೇಕ ಮಂದಿ ಸಣ್ಣ ಪ್ರಮಾಣದ ರೋಗದ ಲಕ್ಷಣಗಳನ್ನು ಹೊಂದಿದ್ದಾರೆ. ಶೇ. 14 ಮಂದಿ ನ್ಯೂಮೋನಿಯಾದಂತಹ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶೇ. 5 ಮಂದಿಯ ಸ್ಥಿತಿ ಹೀನಾಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts