More

    ತಾಯಿಗೆ ಸಮಯ ನೀಡುವುದು ದೌರ್ಜನ್ಯವಲ್ಲ; ಜೀವನಾಂಶವೂ ನಿರಾಕರಣೆ

    ಮುಂಬೈ: ತಾಯಿಗೆ ಸಮಯ ಮತ್ತು ಹಣ ನೀಡುವುದನ್ನು ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುವುದಿಲ್ಲ ಎಂಬ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಕೌಟುಂಬಿಕ ದೌರ್ಜನ್ಯದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ಆರೋಪಿಗಳ ವಿರುದ್ಧದ ಆರೋಪಗಳು ಅಸ್ಪಷ್ಟವಾಗಿವೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆಶಿಶ್ ಅಯಾಚಿತ್ ಮಂಗಳವಾರ ಹೇಳಿದ್ದಾರೆ. ರಾಜ್ಯ ಸಚಿವಾಲಯದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ಮತ್ತು ಜೀವನಾಂಶ ಭತ್ಯೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

    ಕೋರ್ಟ್ ಹೇಳಿದ್ದೇನು?: ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಕಾನೂನಿನ ಅಡಿಯಲ್ಲಿ ಯುವತಿ ಯಾವುದೇ ಪ್ರಯೋಜನ ಅಥವಾ ಪರಿಗಣನೆಗೆ ಅರ್ಹಳಲ್ಲ ಎಂದು ನ್ಯಾಯಾಲಯ ಹೇಳಿದೆ. ತನ್ನ ಮಗಳು ಅವಿವಾಹಿತಳಾಗಿರುವುದರಿಂದ ಜೀವನಾಂಶ ನೀಡಬೇಕು ಎಂಬ ಮಹಿಳೆಯ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ.

    ಆರೋಪ ನಿರಾಕರಿಸಿದ ಪತಿ: ಮಹಿಳೆಯ ಪತಿ ಮತ್ತು ಸಂಬಂಧಿಕರು ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಪತಿ ಎಂದು ಪರಿಗಣಿಸದ ಮಹಿಳೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಹಿಳೆಯ ಕ್ರೌರ್ಯದಿಂದಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಆಕೆಯ ಪತಿ ಹೇಳಿದ್ದಾರೆ. ಅವರ ಪತ್ನಿ ಅನುಮತಿಯಿಲ್ಲದೆ ಎನ್​ಆರ್​ಐ ಖಾತೆಯಿಂದ 21.68 ಲಕ್ಷ ರೂಪಾಯಿ ಪಡೆದು ಫ್ಲಾ್ಯಟ್ ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಹಿಳೆಯ ದೂರು ಏನು?: ತಾಯಿಯ ಮಾನಸಿಕ ಖಾಯಿಲೆ ಮರೆಮಾಚಿ ಪತಿ ತನ್ನನ್ನು ವಂಚಿಸಿದ್ದಾರೆ. ತನ್ನ ಅತ್ತೆಗೆ ತಾನು ಕೆಲಸ ಮಾಡುವುದು ಇಷ್ಟವಿರಲಿಲ್ಲ. ಈ ಬಗ್ಗೆ ಪ್ರತಿದಿನ ಜಗಳವಾಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. 1993 ರಿಂದ 2004 ರವರೆಗೆ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ರಜೆಗೆಂದು ಊರಿಗೆ ಬಂದಾಗ ತಾಯಿಯನ್ನು ಭೇಟಿ ಮಾಡಿ ಪ್ರತಿ ವರ್ಷ 10 ಸಾವಿರ ರೂ. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹಣ ನೀಡಿದ್ದು, ಗಂಡನ ಮನೆಯ ಅನೇಕರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts