More

    ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಿ

    ಕಳಸ: ಮನುಷ್ಯ ಸಂಘ ಜೀವಿಯಾದಾಗ ಮಾತ್ರ ಜೀವನ ಸಂತೋಷವಾಗಿರುವ ಜತೆಗೆ ಉನ್ನತಿಯಡೆಗೆ ಸಾಗುತ್ತದೆ ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೆಶ್ವರ ಜೋಷಿ ಹೇಳಿದರು.
    ರೋಟರಿ ಕ್ಲಬ್ ಕಳಸ ಮತ್ತು ರೋಟರಿ ಸಮುದಾಳ ದಳ ಹೊರನಾಡು ಇವರ ಸಹಯೋಗದೊಂದಿಗೆ ಕಳಸದಲ್ಲಿ ಸೋಮವಾರ ಆಯೋಜಿಸಿದ್ದ ರೋಟರಿ ಸಮುದಾಯ ದಳ ಜಿಲ್ಲಾ ಸಮ್ಮೇಳನದ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿ ಶಕ್ತಿಯಾಗಿ ರೂಪುಗೊಂಡಾಗ ಈ ಸಮುದಾಯ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಮನುಷ್ಯ ತಮ್ಮ ಸಾಧನೆ ಜತೆಯಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ಕಾಣಬೇಕು.ಇದರಿಂದ ಜೀವನ ಪರಿಪೂರ್ಣತೆ ಕಾಣುತ್ತದೆ. ಉತ್ತಮ ಸಂಸಾರವೇ ಈ ಸಮಾಜದ ಸಧೃಡ ಬದುಕಿಗೆ ಕಾರಣ ಎಂದು ಹೇಳಿದರು.

    ಕಳಸ ರೋಟರಿ ಸಂಸ್ಥೆ ಅಧ್ಯಕ್ಷೆ ಸಾವಿತ್ರಿ ಜಿ.ಜೋಷಿ, ರೋಟರಿ ಸಮುದಾಯದಳ ಜಿಲ್ಲಾ ಸಭಾಪತಿ ಪಿ.ಎ.ಕುಮಾರಸ್ವಾಮಿ, ಉಪಸಭಾಪತಿ ವಿವನ್ ಡಿ ಸೋಜ, ಸಮ್ಮೇಳನ ಅಧ್ಯಕ್ಷೆ ರಾಜಲಕ್ಷ್ಮೀ ಬಿ ಜೋಷಿ, ಜಿಲ್ಲಾ ಪ್ರತಿನಿಧಿ ಎಚ್.ಸಿ.ಅಣ್ಣಯ್ಯ, ಸಮುದಾಯ ದಳ ಹೊರನಾಡು ಅಧ್ಯಕ್ಷ ಡಿ.ಆರ್.ಧರಣೇಂದ್ರ ಜೈನ್, ಹರ್ಷ, ರವಿ, ಧರಣೇಂದ್ರ ಸಿಂಗ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts