More

    ಮುನಿಗಳ ಹತ್ಯೆಗೈದವರಿಗೆ ಕಠಿಣ ಶಿಕ್ಷೆ ವಿಧಿಸಿ

    ಬ್ಯಾಡಗಿ: ಜೈನ ಮುನಿ ಆಚಾರ್ಯ ಶ್ರೀಕಾಮಕುಮಾರ ಮಹಾರಾಜರ ಹತ್ಯೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ಜೈನ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

    ಜೈನ ಸಮಾಜದ ಜಿಲ್ಲಾ ಉಪಾಧ್ಯಕ್ಷ ಶಿವರಾಜಪ್ಪ ಅಪ್ಪಣ್ಣವರ ಮಾತನಾಡಿ, ಶ್ರೀ ಕಾಮಕುಮಾರ ಮುನಿ ಮಹಾರಾಜರ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಧಾರ್ಮಿಕ ಸೇವೆಯಲ್ಲಿ ತೊಡಗಿದ್ದ ಸ್ವಾಮೀಜಿಯವರನ್ನು ಚಿತ್ರ ಹಿಂಸೆ ಮಾಡಿ ಹತ್ಯೆ ಮಾಡಿರುವುದು ಖಂಡನಾರ್ಹ. ಘಟನೆಯಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದರು.

    ಮಾಜಿ ಶಾಸಕ ವಿರೂಪಾಕ್ಷ ಬಳ್ಳಾರಿ ಮಾತನಾಡಿ, ಸರ್ಕಾರ ತಕ್ಷಣ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಠ-ಮಾನ್ಯಗಳಿಗೆ ಭದ್ರತೆಯ ವ್ಯವಸ್ಥೆ ಕಲ್ಪಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಸಮಾಜದ ಶ್ರೇಣಿಕರಾಜ ಯಳವತ್ತಿ ಮಾತನಾಡಿದರು. ಹಳೇ ಪುರಸಭೆಯಿಂದ ತಹಸೀಲ್ದಾರ್ ಕಾರ್ಯಾಲಯದವರೆಗೂ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಸ್.ವಿ. ಪ್ರಸಾದ ಅವರಿಗೆ ಮನವಿ ಸಲ್ಲಿಸಲಾಯಿತು.

    ಪ್ರತಿಭಟನೆಯಲ್ಲಿ ಅಶೋಕ ಜೈನ, ಜಯಪ್ಪ ಕಡೂರ, ಅಂಬಾಲಾಲ ಜೈನ, ಮುರಿಗೆಪ್ಪ ಶೆಟ್ಟರ, ಎಚ್.ಎನ್. ಜಾಧವ, ಸುರೇಶ ಉದ್ಯೋಗಣ್ಣವರ, ಈರಣ್ಣ ಚೌಟಿ, ಎಸ್.ಎನ್ ಬಾರ್ಕಿ, ಭಾರತಿ ಕುಲಕರ್ಣಿ, ಸರೋಜಾ ಉಳ್ಳಾಗಡ್ಡಿ, ವಿದ್ಯಾ ಶೆಟ್ಟಿ, ಕೆಂಪೇಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts