More

    ಕ್ಲೋಜರ್​ ಕಾಮಗಾರಿ ನಡೆಸಲು ವಿನಾಯಿತಿ ನೀಡಿ

    ವಿಜಯಪುರ: ಕಾಲುವೆಗಳ ಕ್ಲೋಜರ್​ ಕಾಮಗಾರಿ ನಡೆಸಲು ನೀತಿ ಸಂಹಿತೆಯಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.

    ನಂತರ ಮಾತನಾಡಿದ ಸಂದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಆಲಮಟ್ಟಿ ಲಾಲ್​ ಬಹಾದುರ್​ ಶಾಸಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳಲ್ಲಿ ಮುಳ್ಳು ಕಂಟಿಗಳು ಮತ್ತು ಹೂಳು ತುಂಬಿರುವುದರಿಂದ ಕೊನೇ ಭಾಗದ ರೈತರು ನೀರಿನಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.

    ಕಳೆದ ಬಾರಿ ಅನುದಾನ ಕೊರತೆಯಿಂದಾಗಿ ಕಾಲುವೆಗಳ ಕ್ಲೋಜರ್​ ಕಾಮಗಾರಿ ಮಾಡಲಿಲ್ಲ. ಈಗ ಲೋಕಸಭಾ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಕೆಬಿಜೆಎನ್​ಎಲ್​ ಅಧಿಕಾರಿಗಳು ಹೇಳುತ್ತಿದ್ದಾರೆ.

    ನೀತಿ ಸಂಹಿತೆ ಮುಗಿಯುವುದರೊಳಗೆ ಮಳೆಗಾಲ ಆರಂಭವಾಗಲಿದೆ. ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಕಾಲುವೆ ಕ್ಲೋಜರ್​ ಕಾಮಗಾರಿಗೆ ನೀತಿ ಸಂಹಿತೆಯಿಂದ ಚುನಾವಣಾ ಆಯೋಗ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು.

    ಜಿಲ್ಲಾ ಸಂಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಬಾಲಪ್ಪಗೌಡ ಲಿಂಗದಳ್ಳಿ, ಹೊನಕೇರಪ್ಪ ತೆಲಗಿ, ಶೆಟ್ಟಪ್ಪ ಲಮಾಣಿ, ಪ್ರಹ್ಲಾದ ನಾಗರಾಳ, ವಿಠಲ ಬಿರಾದಾರ, ರಾಮಣ್ಣಗೌಡ ಹಾದಿಮನಿ, ಶಿವಣ್ಣಗೌಡ ತುಳಸಗೇರಿ, ಮಲ್ಲಣ್ಣಗೌಡ ದೇವರೆಡ್ಡಿ, ಲಾಲಸಾಬ ಹಳ್ಳೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts