More

    ಮುಸ್ಲಿಂ ಶಾಸಕರಿಗೆ ಡಿಸಿಎಂ ಸ್ಥಾನ ಕೊಡಿ

    ಬಸವನಬಾಗೇವಾಡಿ: ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಶೇ. 88ರಷ್ಟು ಮುಸ್ಲಿಮರು ಮತ ಚಲಾಯಿಸಿದ್ದು. ಹೀಗಾಗಿ ಮುಸ್ಲಿಂ ಶಾಸಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಜಾಮೀಯಾ ಮಸೀದಿಯ ಅಧ್ಯಕ್ಷ ಶಬ್ಬಿರ್‌ಮ್ಮದ ನದಾಫ್ ಹೇಳಿದರು.

    ಗುರುವಾರ ಪಟ್ಟಣದ ಜಾಮೀಯಾ ಮಸೀದಿಯ ಶಾದಿಮಹಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ 9ಜನ ಮುಸ್ಲಿಂ ಸಮಾಜದವರು ಶಾಸಕರಾಗಿದ್ದು. ಇದರಲ್ಲಿ ಒಂದು ಸ್ಥಾನ ಡಿಸಿಎಂ ಕೊಡಬೇಕು. ಉಳಿದ 3ರಿಂದ 4ಶಾಸಕರಿಗೆ ಉನ್ನತ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಒತ್ತಾಯಿಸಿದ್ದಾರೆ.

    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಶೇ. 90ರಷ್ಟು ಮತ ಚಲಾವಣೆಯಾಗಬೇಕಾದರೆ ನಮ್ಮ ಸಮಾಜದ ಶಾಸಕರಿಗೆ ಉನ್ನತ ಸ್ಥಾನಮಾನ ನೀಡುವುದರಿಂದ ಪಕ್ಷಕ್ಕೆ ಸಹಕಾರವಾಗುತ್ತದೆ. ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲರು 6 ಬಾರಿ ಶಾಸಕರಾಗಿದ್ದು. ಅವರ ಹಿರಿತನದ ಆಧಾರದ ಮೇಲೆ ಜಿಲ್ಲೆಯ ಅಭಿವೃದ್ಧಿ ದೃಷ್ಠಿಕೋನ ಇಟ್ಟುಕೊಂಡು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

    ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಸದಸ್ಯ ಕಮಲಸಾಬ ಕೊರಬು, ಎಚ್.ಆರ್. ಬಾಗವಾನ, ಇಬ್ರಾಹಿಂ ಬೊಮ್ಮನಹಳ್ಳಿ, ಬಂದೇನವಾಜ ನಂದವಾಡಗಿ, ಮಮ್ಮದಸಾಬ ಹೊಕ್ರಾಣಿ, ದಾವಲಸಾಬ ತಾಂಬೊಳಿ, ಚಾಂದಬಾಶಾ ಕೊರಬು, ಅಬ್ದುಲ್ ರಜಾಕ ಬಾಗವಾನ, ಹುಚ್ಚೇಸಾಬ ಚಳ್ಳಿಗಿಡದ, ರಮಜಾನ್ ಹೆಬ್ಬಾಳ, ದಸ್ತಗೀರ ವಜ್ಜಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts