More

    ಹೆಣ್ಣು ಮಕ್ಕಳಿಗಿಲ್ಲ ಸೂಕ್ತ ರಕ್ಷಣೆ

    ಬೇಲೂರು: ಮಹಿಳೆಯರಿಗೆ ಮೂಲ ಹಕ್ಕುಗಳನ್ನು ದೊರಕಿಸಿಕೊಡುವ ಸಲುವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಸಾಹಿತಿ ಶೈಲಜಾ ಹಾಸನ್ ಹೆಳಿದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶಿಕ್ಷಣ ಕಸ್ತೂರಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಅಂಗವಾಗಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿಗೂ ಮಹಿಳೆಯರು ಶೇ.ಒಂದರಷ್ಟು ಮಾತ್ರ ತಮ್ಮ ಹಕ್ಕು ಚಲಾಯಿಸುವಲ್ಲಿ ಸಫಲವಾಗಿದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಮತ್ತು ಸುರಕ್ಷತೆ ಇಲ್ಲ. ಮನೆಯ ಒಳಗಾಗಲೇ ಅಥವಾ ಹೊರಗಾಗಲಿ ಮಹಿಳೆ ಒಬ್ಬಂಟಿಯಾಗಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಶಾಲೆಗೆ ಹೋಗುವ ಹುಡುಗಿಯ ಮೇಲೆ ಆ್ಯಸಿಡ್ ಎರಚುವ ವಿಕೃತ ಮನೋಭಾವ ಹೆಚ್ಚಾಗುತ್ತಿದ್ದು, ಇಂತಹ ದುಷ್ಕೃತ್ಯಗಳನ್ನು ತಡೆಯುವ ನಿರ್ಣಯ ಕೈಗೊಳ್ಳಬೇಕಿದೆ. ಜತೆಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಹಕ್ಕನ್ನು ಚಲಾಯಿಸಲು ಶತಮಾನಗಳಿಂದ ಮಹಿಳೆ ಹೋರಾಟ ಮಾಡುತ್ತಲೇ ಬರುತ್ತಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಕೆಲವೇ ಮಹಿಳೆಯರು ಪ್ರಗತಿ ಸಾಧಿಸಿದ್ದು, ಉಳಿದವರು ಹಿಂಜರಿಕೆಯಿಂದ ಈಗಲೂ ದೂರ ಉಳಿಯುತ್ತಿರುವುದು ವಿಷಾದನೀಯ. ಮಹಿಳೆ ತಾನು ಅಬಲೆ ಎಂಬ ಮನೋಭಾವ ಬಿಡಬೇಕು.ಪಾಲಕರು ಮನೆಯಲ್ಲಿ ಹೆಣ್ಣು-ಗಂಡು ಎಂದು ತಾರತಮ್ಯ ಮಾಡದೆ ಸಮಾನತೆಯಿಂದ ನೋಡಿಕೊಳ್ಳಬೇಕು ಎಂದರು.

    ಕಾರ್ಯಕ್ರಮದಲ್ಲಿ 24 ಶಿಕ್ಷಕರಿಗೆ ಶಿಕ್ಷಣ ಕಸ್ತೂರಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿಆರ್‌ಸಿ ಶಿವಮರಿಯಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪೂರ್ಣೇಶ್, ನಿರ್ದೇಶಕ ಗಂಗಾಧರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಂ.ಆನಂದ್, ಭದ್ರೇಗೌಡ, ನಿರ್ದೇಶಕರಾದ ಲಕ್ಷ್ಮಣ್, ಲೋಕೇಶ್, ಸುಧಾಮಣಿ ಧರ್ಮಾಭೋವಿ, ಶಿಕ್ಷಕ ಕೇಶವೇಗೌಡ, ನಿವೃತ್ತ ಶಿಕ್ಷಕ ಮಂಜೇಗೌಡ, ಜಯಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts