More

    ಗೆಳತಿಯ ನಗ್ನ ವಿಡಿಯೋ ಅಪ್ಲೋಡ್ ಮಾಡಿದ ಯುವಕ, ಯುವತಿ ದೂರು

    ಬೆಳಗಾವಿ: ಅಶ್ಲೀಲ ವೆಬ್‌ಸೈಟ್‌ಗಳಿಗೆ ತನ್ನ ಗೆಳತಿಯ ನಗ್ನ ವಿಡಿಯೋ ಅಪ್ಲೋಡ್ ಮಾಡಿ ವಿಕೃತಿ ಮೆರೆದ ಯುವಕನ ವಿರುದ್ಧ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.

    ಸ್ಥಳೀಯ ಶಾಸಿ ನಗರದ ಶಿವಾಜಿ ಗಾರ್ಡನ್ ಸಮೀಪದ ನಿವಾಸಿ ಸೂರ್ಯಾಜಿ ಮಗದೂತ, ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿರುವ ಆರೋಪಿತ. ನ್ಯೂ ಗೂಡ್ಸ್‌ಶೆಡ್ ರಸ್ತೆಯ ಒನ್ ಸಿಟಿ ಹೋಂ ಬಡಾವಣೆ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ ಆತ, ಸಲುಗೆಯಲ್ಲಿರುವಾಗ ಸೆರೆ ಹಿಡಿದ ಆಕೆಯ ಅಶ್ಲೀಲ ವಿಡಿಯೋಗಳನ್ನು ಹತ್ತು ವೆಬ್‌ಸೈಟ್‌ಗಳಿಗೆ ಅಪ್ಲೋಡ್ ಮಾಡಿ ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ.

    ಕಳೆದ ಜುಲೈ 12ರಂದು ವೆಬ್‌ಸೈಟ್‌ಗಳಿಗೆ ವಿಡಿಯೋ ಅಪ್ಲೋಡ್ ಮಾಡಿದ್ದು, ಕೆಲ ದಿನಗಳ ನಂತರ ವಿಡಿಯೋ ಇರುವುದನ್ನು ಗಮನಿಸಿದ ಪರಿಚಿತರು ಯುವತಿಗೆ ತಿಳಿಸಿದ್ದಾರೆ. ಇದೀಗ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts