More

    8 ಗಂಟೆಗಳ ಕಾಲ ಕೆರೆಯಲ್ಲಿ ಈಜಿ ದಾಖಲೆ ಬರೆದ 10ನೇ ತರಗತಿ ವಿದ್ಯಾರ್ಥಿನಿ!

    ಛತ್ತೀಸ್‌ಗಢ: 10ನೇ ತರಗತಿ ವಿದ್ಯಾರ್ಥಿನಿ ಸತತ 8 ಗಂಟೆಗಳ ಕಾಲ ಕೆರೆಯಲ್ಲಿ ಈಜುವ ಮೂಲಕ ದಾಖಲೆ ಬರೆದಿದ್ದಾಳೆ. ವಿದ್ಯಾರ್ಥಿನಿ ಚಂದ್ರಕಲಾ ಓಜಾ ಬೆಳಗ್ಗೆ 5.10 ನಿಮಿಷದಿಂದ ಆರಂಭಿಸಿ ಮಧ್ಯಾಹ್ನ 1.10 ನಿಮಿಷಕ್ಕೆ ಈಜು ನಿಲ್ಲಿಸಿದ್ದಾಳೆ. ಇದೀಗ ಈಕೆಯ ಸಾಧನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಿದೆ.

    ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿರುವ ಚಂದ್ರಕಲಾ ತನ್ನ ಐದನೇ ವಯಸ್ಸಿನಿಂದ ಈಜುವುದನ್ನು ಕರಗತ ಮಾಡಿಕೊಂಡಿದ್ದಾಳೆ. ಕ್ರೀಡಾಪಟುಗಳ ಕುಟುಂಬಕ್ಕೆ ಸೇರಿದ ಚಂದ್ರಕಲಾ ರಾಷ್ಟ್ರೀಯ ಮಟ್ಟದ ಈಜು ಚಾಂಪಿಯನ್​ಶಿಪ್​ ಸೇರಿ 3 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾಳೆ.

    ಇದನ್ನೂ ಓದಿ: PHOTOS | ಸ್ಕೇಟಿಂಗ್ ಬೋರ್ಡ್ ಮೇಲೆ ಅಜ್ಜಿಯಂದಿರ ಸಾಹಸ! ಫೋಟೋ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು…

    ನಿತ್ಯ 10-12 ಗಂಟೆಗಳ ಕಾಲ ಅಭ್ಯಾಸ

    ಕೆರೆಯಲ್ಲಿ ಸತತ 10 ಗಂಟೆಗಳ ಕಾಲ ಈಜಿ ದಾಖಲೆ ಬರೆದ ಬಳಿಕ ಚಂದ್ರಕಲಾ ಮಾತನಾಡುತ್ತಾ, ಓಂ ಕುಮಾರ್ ಓಜಾ ಅವರ ಮಾರ್ಗದರ್ಶನದಲ್ಲಿ ಪ್ರತಿದಿನ 10-12 ಗಂಟೆಗಳ ಕಾಲ ಅಭ್ಯಾಸ ಮಾಡಿದ್ದೇನೆ. ನನ್ನ ಪ್ರಯತ್ನವನ್ನು ಸಂಪೂರ್ಣ ಗ್ರಾಮ ಬೆಂಬಲಿಸಿದೆ. ಆಹಾರ ಮತ್ತು ನಿದ್ರೆಯ ವಿಚಾರದಲ್ಲಿ ಸಮತೋಲನ ಕಾಯ್ದುಕೊಂಡಿರುವುದರಿಂದ ನಿರಂತರವಾಗಿ ಈಜಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾಳೆ.

    ಸಾಧನೆಯ ಬಗ್ಗೆ ಮೆಚ್ಚುಗೆ

    ಚಂದ್ರಕಲಾ ಸಾಧನೆಯ ಬಗ್ಗೆ ಸಂಪೂರ್ಣ ಪುರೈ ಗ್ರಾಮ ಸಂಭ್ರಮಿಸುತ್ತಿದೆ. ಕ್ರೀಡಾ ಇಲಾಖೆಯ ಅಧಿಕಾರಿಗಳು ಮತ್ತು ಛತ್ತೀಸ್‌ಗಢ ಸರ್ಕಾರ ಮೆಚ್ಚುಗೆ ಸೂಚಿಸಿದೆ. ಛತ್ತೀಸ್‌ಗಢದ ಗೃಹ ಸಚಿವ ತಾಮ್ರಧ್ವಜ್ ಸಾಹು ಚಂದ್ರಕಲಾಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರ ಮತ್ತು ಪದಕ ಹಸ್ತಾಂತರಿಸಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರುವ ಬೋರ್ಡ್

    ಮೂಲಭೂತ ಸೌಲಭ್ಯ ಬೇಕು

    ಚಂದ್ರಕಲಾ ಹಿರಿಯ ಸಹೋದರಿ ಭೂಮಿಕಾ ರಾಷ್ಟ್ರೀಯ ಮಟ್ಟದ ಈಜುಗಾರ್ತಿಯಾಗಿದ್ದರೆ, ಕಿರಿಯ ಸಹೋದರ ಸಿದ್ಧಾರ್ಥ್ ರಾಜ್ಯ ಮಟ್ಟದ ಈಜುಗಾರ. ಭವಿಷ್ಯದಲ್ಲಿ ಉತ್ತಮ ಈಜು ಪಟುವಾಗಿ ಗುರುತಿಸಿಕೊಳ್ಳಲು ನಿರಂತರ ಪರಿಶ್ರಮ ಪಡುತ್ತಿದ್ದಾಳೆ. ತಾನು ವಾಸವಿರುವ ಪುರೈ ಗ್ರಾಮದಲ್ಲಿ ಈಜುಕೊಳ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇದರಿಂದ ಸಾಧನೆ ಮಾಡಬಯಸುವ ಮಂದಿ ಹಿಂದೇಟು ಹಾಕುವಂತಾಗಿದೆ ಎಂದು ಚಂದ್ರಕಲಾ ಹೇಳಿಕೊಂಡಿದ್ದಾಳೆ.

    ಕ್ರೀಡಾ ಗ್ರಾಮದ ಸಾಧಕಿ

    ಛತ್ತೀಸ್​​ಗಢದ ದುರ್ಗ್ ಜಿಲ್ಲೆಯ ಪುರೈ ಗ್ರಾಮ ದೇಶಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳನ್ನು ಕೊಟ್ಟ ಕ್ರೀಡಾ ಗ್ರಾಮವೆಂದು ಜನಪ್ರಿಯವಾಗಿದೆ. ಪ್ರಸ್ತುತ ಈ ಗ್ರಾಮದ 103 ಯುವ ಈಜುಪಟುಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವನ್ನು ಹೊಂದಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: VIDEO | ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದ ಪೊಲೀಸ್; ಅಧಿಕಾರಿಯ ಕಾರ್ಯಕ್ಕೆ ಸಿಎಂ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts