More

    ಕ್ವಾರಂಟೈನ್​ನಲ್ಲಿ ಇದ್ದರೂ ನಿಲ್ಲದ ಕಾಮುಕರ ಅಟ್ಟಹಾಸ, ಮುಚ್ಚಿಹಾಕಲು ರಾಜಕೀಯ ಒತ್ತಡ

    ಪಟನಾ: ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿಯಾದ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಿದ್ದರೂ ಅಪರಾಧಗಳ ರಾಜಧಾನಿ ಎನಿಸಿಕೊಂಡಿರುವ ಬಿಹಾರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ರಾಜ್ಯಕ್ಕೆ ಮರಳಿ ರೊಹಟಾಸ್​ನ ದಾವತ್​ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಕ್ವಾರಂಟೈನ್​ನಲ್ಲಿರುವ ಇಬ್ಬರು ವಲಸೆ ಕಾರ್ಮಿಕರು ತಮ್ಮ ಗ್ರಾಮದ ಇನ್ನು ನಾಲ್ವರ ಜತೆ ಸೇರಿ 18 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿರುವುದು ಶೋಚನೀಯ ಸಂಗತಿ. ಆದರೆ, ಸಂತ್ರಸ್ತೆಯ ಕುಟುಂಬದವರು ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವ ಬಗ್ಗೆ ಹುಯ್ಯಿಲೆಬ್ಬಿಸಿದ ನಂತರದಲ್ಲಿ ಕ್ವಾರಂಟೈನ್​ನಲ್ಲಿದ್ದ ಇಬ್ಬರು ವಲಸೆ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

    ಗುರುವಾರ ರಾತ್ರಿ 9.30ಕ್ಕೆ ಬಹಿರ್ದೆಸೆಗೆಂದು ಸಂತ್ರಸ್ತೆ ಮನೆಯಿಂದ ಹೊರಬಂದಿದ್ದಳು. ಇದೇ ಸಂದರ್ಭದಲ್ಲಿ ಕ್ವಾರಂಟೈನ್​ನಲ್ಲಿದ್ದ ವಲಸೆ ಕಾರ್ಮಿಕರಿಬ್ಬರು ಕ್ವಾರಂಟೈನ್​ ಕಟ್ಟಡದಿಂದ ತಪ್ಪಿಸಿಕೊಂಡು ಕಾಂಪೌಂಡ್​ ಜಿಗಿದು ಹೊರಬಂದಿದ್ದರು. ಎದುರಿಗೆ ಯುವತಿ ಕಾಣುತ್ತಲೇ ತಮ್ಮ ಗ್ರಾಮದ ಇನ್ನೂ ನಾಲ್ವರು ಯುವಕರನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದರು. ಕ್ವಾರಂಟೈನ್​ನಲ್ಲಿದ್ದ ಯುವಕರು ಮೊದಲಿಗೆ ಆಕೆಯನ್ನು ಹಿಡಿದುಕೊಂಡರು. ಬಳಿಕ ಸ್ವಲ್ಪದೂರ ಕರೆದೊಯ್ದು ಆರೂ ಜನರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು.

    ಇದನ್ನೂ ಓದಿ: 3 ವಾರಗಳಲ್ಲಿ 4446 ಕೋಟಿ ರೂ. ಪಾವತಿಸಲು ಕೋರ್ಟ್ ಆದೇಶ: ಯಾರಿಗೆ, ಏಕೆ?

    ಬಳಿಕ ಮನೆಗೆ ಹಿಂದಿರುಗಿದ ಯುವತಿ ನಡೆದ ವಿಷಯವನ್ನು ತಿಳಿಸಿದ್ದಳು. ಆಕೆಯ ಕುಟುಂಬದವರು ಕ್ವಾರಂಟೈನ್​ ಕೇಂದ್ರದೆದುರು ಜಮಾಯಿಸಿ, ಅತ್ಯಾಚಾರಿಗಳನ್ನು ಹೊರಗೆ ಕಳುಹಿಸುವಂತೆ ಗಲಾಟೆ ಆರಂಭಿಸಿದರು. ಆದರೂ ಪೊಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, ಮುಚ್ಚಿಹಾಕಲು ಯತ್ನಿಸಿದರು ಎನ್ನಲಾಗಿದೆ.

    ಇದಾದ ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಪೊಲಿಸರು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಂತ್ರಸ್ತೆಯ ಕುಟುಂಬದವರು ಹುಯ್ಯಿಲೆಬ್ಬಿಸಲು ಆರಂಭಿಸಿದ ನಂತರದಲ್ಲಿ ಪೊಲೀಸರು ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಮುಂದಾದರು ಎಂದು ಹೇಳಲಾಗಿದೆ.
    ಚಂಚಲ್​ ಯಾದವ್​ (22) ಮತ್ತು ಸುರೇಶ್​ ಯಾದವ್​ (22) ಎಂಬಿಬ್ಬರನ್ನು ಬಂಧಿಸಲಾಗಿದೆ. ವಿಜಯ್​ ಯಾದವ್​ (20), ), ಮುಖೇಶ್​ ಯಾದವ್​ (21), ಅಮಿತ್​ ಪಾಸ್ವಾನ್​ (18) ಮತ್ತು ಚುಲ್ಲಿ ಪಾಸ್ವಾನ್​ (18) ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಾಗಿ ಸಂತ್ರಸ್ತೆಯನ್ನು ಸಸಾರಾಂ ಸದರ್​ ಹಾಸ್ಪಿಟಲ್​ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮೆಟ್ರೋ ಸಂಚಾರ ಆರಂಭಕ್ಕೆ ಪೂರ್ವಸಿದ್ಧತಾ ಕಾರ್ಯ, ದೈಹಿಕ ಅಂತರ ಕಡ್ಡಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts