More

    ವಯಸ್ಸಾದಂತೆ ಕಾಣುತ್ತಿದ್ದ 15ರ ಬಾಲಕಿ ಬದುಕಲ್ಲಿ ನಡೆದ ಪವಾಡದಿಂದ ಆಕೆ ಇಂದು ಎಷ್ಟು ಖುಷಿಯಾಗಿದ್ದಾಳೆ ಗೊತ್ತಾ?

    ಬೀಜಿಂಗ್​: ವಿರಳ ಕಾಯಿಲೆಯಿಂದ ವಯಸ್ಸಾದಂತೆ ಕಾಣುತ್ತಿದ್ದ 15 ವರ್ಷದ ಹುಡುಗಿಯೊಬ್ಬಳು ಪ್ಲ್ಯಾಸ್ಟಿಕ್ ಸರ್ಜರಿಯಿಂದ ಹೊಸ ಜೀವನ ಸ್ವರೂಪ ಪಡೆದುಕೊಂಡ ಅಪರೂಪದ ಪ್ರಕರಣ ಚೀನಾದಲ್ಲಿ ತಿಂಗಳ ಹಿಂದೆ ಕಂಡಬಂದಿತ್ತು. ಇದೀಗ ಅದೇ ಹುಡುಗಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಹಿಡಿದು ತನ್ನ ಜೀವನದಲ್ಲಿ ಅನುಭವಿಸುತ್ತಿರುವ ಸಂತಸ ಕ್ಷಣಗಳನ್ನು ಹಂಚಿಕೊಂಡಿದ್ದಾಳೆ.

    ಚೀನಾದ ಶೆನ್ಯಾಂಗ್​ ನಿವಾಸಿಯಾಗಿರುವ ಸಿಯೊಡೊನಿಮ್​ ಕ್ಷಿಯೊ ಫೆಂಗ್​ ಹೆಸರಿನ ಬಾಲಕಿ ವಿರಳ ಕಾಯಿಲೆಯಿಂದ ವಯಸ್ಸಾದಂತೆ ಕಾಣುತ್ತಿದ್ದಳು. ಅವಳ ಸುಕ್ಕುಗಟ್ಟಿದ ಮುಖವನ್ನು ನೋಡಿ ಶಾಲೆಯಲ್ಲಿ ಎಲ್ಲರೂ ಭಯಬೀಳುತ್ತಿದ್ದರು. ಇದರಿಂದ ಫೆಂಗ್​ಗೆ ಏಕಾಂಗಿ ಭಾವನೆ ಮತ್ತು ಕೀಳರಿಮೆ ಕಾಡುತ್ತಿತ್ತಂತೆ. ಇತರರಂತೆ ನಾನಿಲ್ಲವಲ್ಲ ಎಂದು ದಿನನಿತ್ಯ ಫೆಂಗ್​ ಕೊರಗುತ್ತಿದ್ದಳು.

    ಬಳಿಕ ಪ್ಲ್ಯಾಸ್ಟಿಕ್​ ಸರ್ಜರಿಗೆ ಒಳಗಾದ ಫೆಂಗ್​, ಜನವರಿ 20ರಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಳು. ಬಹಳ ಸುಂದರ ಹುಡುಗಿಯಂತೆ ಫೆಂಗ್​ ಕಾಣಿಸುತ್ತಿದ್ದಳು.

    ಇದೀಗ ತನ್ನ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿರುವ ಫೆಂಗ್, ಈ ಹಿಂದೆ ಸೆಲ್ಫಿ ತೆಗೆದುಕೊಳ್ಳುವುದಕ್ಕೂ ನಾನು ಹೆದರುತ್ತಿರಲಿಲ್ಲ. ಆದರೆ, ಯಾರು ಸ್ನೇಹಿತರು ಇರಲಿಲ್ಲ. ಇದೀಗ ನನ್ನಷ್ಟಕ್ಕೆ ನಾನೇ ಸಾಕಷ್ಟು ಸೆಲ್ಫಿ ವಿಡಿಯೋ ಮಾಡಿತ್ತಿರುತ್ತೇನೆ. ನಾನು ಸುಂದರವಾಗಿದ್ದೇನೆ ಮತ್ತು ನನ್ನಲ್ಲಿ ಹೆಚ್ಚು ನಂಬಿಕೆ ಈಗ ಬೆಳೆದಿದೆ ಎಂದು ಹೇಳಿಕೊಂಡಿದ್ದಾಳೆ. ಆದರೆ, ಇದಕ್ಕೂ ಮುನ್ನ ಆಕೆಯ ಮುಖ ನೋಡಿ ಶಾಲೆಯಲ್ಲಿ ಆಕೆ ಬಳಿ ಬರಲು ಹೆದರುತ್ತಿದ್ದರಂತೆ.

    ಈ ಹಿಂದೆ ಇತರರಂತೆ ನಾನು ಕಾಣಬೇಕೆಂದು ಭರವಸೆ ಹೊಂದಿದ್ದೆ. ಆದರೆ ನನ್ನ ಭರವಸೆ ಸುಳ್ಳಾಗಲಿಲ್ಲ. ಅದು ಕೆಲವೇ ದಿನಗಳಲ್ಲಿ ನೆರವೇರಿತು. ನನ್ನ ವಯಸ್ಸಿಗೆ ತಕ್ಕದಾದ ಮುಖವನ್ನು ಹೊಂದಿದ್ದೇನೆ ಎಂದು ಫೆಂಗ್​ ಖುಷಿಯಿಂದ ಹೇಳಿಕೊಂಡಿದ್ದಾಳೆ. ಎಲ್ಲರಂತೆ ಎಲ್ಲರೊಂದಿಗೆ ಬೆರೆತು ಫೆಂಗ್​ ನವ ಜೀವನ ಆರಂಭಿಸಿದ್ದಾಳೆ.

    8 ಮಿಲಿಯನ್ ಮಂದಿಯಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಕಾಯಿಲೆ ಫೆಂಗ್​ ಸ್ಥಿತಿಯ ಬಗ್ಗೆ ಶೆನ್ಯಾಂಗ್​ ಸನ್​ಲೈನ್​ ಪ್ಲ್ಯಾಸ್ಟಿಕ್​ ಸರ್ಜರಿ ಆಸ್ಪತ್ರೆಯ ಸರ್ಜನ್​ ಮಾತನಾಡಿ, ಫೆಂಗ್​ 8 ಮಿಲಿಯನ್ ಮಂದಿಯಲ್ಲಿ ಒಬ್ಬರಿಗೆ ಸಂಭವಿಸುವ ವಿರಾಳಾತಿವಿರಳವಾದ ಪ್ರೊಗೆರಿಯಾ ಕಾಯಿಲೆಗೆ ತುತ್ತಾಗಿದ್ದಳು. ಇದರಿಂದಾಗಿ ಫೆಂಗ್​ ವಯಸ್ಸಾದಂತೆ ಕಾಣುತ್ತಿದ್ದಳು. ಅದೃಷ್ಟವಶಾತ್​ ಫೆಂಗ್​ ಪ್ರಕರಣದಲ್ಲಿ ಈ ಕಾಯಿಲೆ ಆಕೆಯ ಚರ್ಮಕ್ಕೆ ಮಾತ್ರ ಪ್ರಭಾವ ಬೀರಿತ್ತು. ಇದರಿಂದ ಆಕೆಯ ಅಂಗಾಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ ಎಂದು ಹೇಳಿದ್ದರು.

    ಪರೋಪಕಾರಿಗಳಿಗೆ ಧನ್ಯವಾದಗಳು
    ಫೆಂಗ್​ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಾಗಿ ಆಕೆಗೆ ಚಿಕಿತ್ಸೆ ಕೊಡಿಸುವಷ್ಟು ಹಣವಿರಲಿಲ್ಲ. ಆದರೆ, ಪರೋಪಕಾರಿಗಳು ಒಗ್ಗಟ್ಟಿನಿಂದಾಗಿ ಇಂದು ಫೆಂಗ್​ ಹೊಸ ರೂಪ ಪಡೆದುಕೊಂಡಿದ್ದಾಳೆ. ಸುಮಾರು 20,000 ಪೌಂಡ್​ (18,58,448 ರೂ.) ವೈದ್ಯಕೀಯ ವೆಚ್ಚ ಭರಿಸಿ ಫೆಂಗ್​ಗೆ ಚಿಕಿತ್ಸೆ ಕೊಡಿಸಲಾಗಿದೆ.

    ಡಿಸೆಂಬರ್​ 29ರಂದು ಸುಮಾರು 10 ಸರ್ಜನ್​ಗಳಿಂದ ಆಪರೇಷನ್​ ನಡೆದಿದೆ. ಮೂವರು ಅರಿವಳಿಕೆ ತಜ್ಞರು ಮತ್ತು ಐವರು ನರ್ಸ್​ಗಳು ಕೂಡ ಆಪರೇಷನ್​ನಲ್ಲಿ ಕೈಜೋಡಿಸಿದ್ದರು. ಫೆಂಗ್​ ದೇಹದಲ್ಲಿದ್ದ 2.7 ಇಂಚಿನ ದಪ್ಪ ಚರ್ಮವನ್ನು ತೆಗದುಹಾಕಿ, ಪ್ಲ್ಯಾಸ್ಟಿಕ್​ ಸರ್ಜರಿ ಮಾಡಲಾಗಿದೆ.

    ದಯಾಪರತೆ ಮೆರೆದಿದ್ದ ಆಸ್ಪತ್ರೆ
    ಫೆಂಗ್​ಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯೂ ಕೂಡ ಆಕೆಯ ಬೆನ್ನಿಗೆ ನಿಂತಿತ್ತು. ಅಂತಿಮವಾಗಿ 56,000 ಪೌಂಡ್​(52,03,204 ರೂ.) ಆಸ್ಪತ್ರೆ ಬಿಲ್​ ಅನ್ನು ರದ್ದುಗೊಳಿಸಿತ್ತು. ನಿಧಿ ಸಂಗ್ರಹ ಹಣವನ್ನು ಆಕೆಯ ಚೇತರಿಕೆ ಮತ್ತು ಭವಿಷ್ಯದ ಅಧ್ಯಯನಕ್ಕೆ ನೀಡುವುದಾಗಿ ಆಸ್ಪತ್ರೆ ನಿರ್ವಹಣಾ ಮಂಡಳಿ ತಿಳಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts