More

    ಮತ್ತೆ 18 ಜನರಿಗೆ ಪಾಸಿಟಿವ್

    ಯಾದಗಿರಿ: ಗಿರಿ ಜಿಲ್ಲೆಯಲ್ಲಿ ದಿನಗಳೆದಂತೆ ಕರೊನಾ ಕುಣಿತ ಜೋರಾಗುತ್ತಿದ್ದು, ಶನಿವಾರ 18 ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 241ಕ್ಕೇರಿದೆ.

    ಶನಿವಾರದ ವರದಿಯಲ್ಲಿ 5 ವರ್ಷದೊಳಗಿನ ಮೂವರು ಮಕ್ಕಳಿದ್ದಾರೆ. ಗುರುಮಠಕಲ್ ತಾಲೂಕಿನ ಪುಟಪಾಕ್ ಗ್ರಾಮದ 29 ವರ್ಷದ ಪುರುಷ, 20 ವರ್ಷದ ಮಹಿಳೆ, ಗುರುಮಠಕಲ್ನ 45 ವರ್ಷದ ಪುರುಷ, 40 ವರ್ಷದ ಮಹಿಳೆ, ಕೇಶ್ವಾರ್ ಗ್ರಾಮದ 43 ವರ್ಷದ ಪುರುಷ, 19 ವರ್ಷದ ಯುವಕ, 11 ವರ್ಷದ ಬಾಲಕ, ಬದ್ದೇಪಲ್ಲಿ ಗ್ರಾಮದ 39 ವರ್ಷದ ಪುರುಷ, 32 ವರ್ಷದ ಪುರುಷ.

    ಯಾದಗಿರಿ ತಾಲೂಕಿನ ಅರಕೇರಾ (ಬಿ) ಗ್ರಾಮದ 66 ವರ್ಷದ ಪುರುಷ, ಅರಕೇರಾ ತಾಂಡಾದ 30 ವರ್ಷದ ಪುರುಷ, 7 ವರ್ಷದ ಹೆಣ್ಣು ಮಗು, 3 ವರ್ಷದ ಹೆಣ್ಣುಮಗು, 2 ವರ್ಷದ ಗಂಡುಮಗು, ಒಂದು ವರ್ಷದ ಹೆಣ್ಣು ಮಗು, ಕೊಲಮಪಲ್ಲಿ ಗ್ರಾಮದ 19 ವರ್ಷದ ಯುವಕ, 16 ವರ್ಷದ ಯುವತಿ, ಗುರುಮಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದ 17 ವರ್ಷದ ಯುವತಿ ಸೋಂಕಿಗೆ ತುತ್ತಾಗಿದ್ದಾರೆ.

    ಸೋಂಕಿತರೆಲ್ಲರೂ ಅಂತಾರಾಜ್ಯ ಪ್ರಯಾಣ ಹಿನ್ನೆಲೆ ಹೊಂದಿದ್ದು, ಮುಂಬೈಯಿಂದ ಜಿಲ್ಲೆಗೆ ಬಂದ ಈ 18 ಜನರನ್ನು ಗುರುಮಠಕಲ್ನ ಎಸ್.ಟಿ. ಹಾಸ್ಟೆಲ್, ಎಸ್ಎಲ್ಟಿ ಹಾಗೂ ಯಾದಗಿರಿಯ ಡಾನ್ ಬಾಸ್ಕೋ ಶಾಲೆ, ಮಾತರ್ ತೆಲಂಗಾಣ ಹಾಗೂ ಲಿಂಗೇರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts