More

    ಗ್ರಾ.ಪಂ ಚುನಾವಣೆಯಲ್ಲಿ 1 ಮತದಿಂದ ಸೋತ ಅಭ್ಯರ್ಥಿಗೆ 11 ಲಕ್ಷ ನಗದು, ಕಾರು, ಅರ್ಧ ಎಕರೆ ಜಮೀನು ಕೊಟ್ಟ ಗ್ರಾಮಸ್ಥರು!

    ಚಂಡೀಗಢ: ಚುನಾವಣೆಯಲ್ಲಿ ಸೋತು ಹಣ ಕಳೆದುಕೊಂಡವರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಚುನಾವಣೆಯಲ್ಲಿ ಸೋತು ಬಂಪರ್​ ಆಫರ್​ ಪಡೆದುಕೊಂಡಿದ್ದಾರೆ. ಈ ವಿಚಿತ್ರ ಪ್ರಕರಣ ಹರಿಯಾಣದಿಂದ ವರದಿಯಾಗಿದೆ.

    ಪಂಚಾಯತ್​ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಗ್ರಾಮಸ್ಥರೆಲ್ಲರು ಸೇರಿ 11 ಲಕ್ಷ ರೂಪಾಯಿ ನಗದು ಮತ್ತು ಒಂದು ಹಾಗೂ ಕೆಲವು ಜಮೀನನ್ನು ಉಡುಗೊರೆಯಾಗಿ ನೀಡಿದ್ದಾರೆ. ಹರಿಯಾಣದ ಪಂಚಾಯತ್​ ಚುನಾವಣೆಯಲ್ಲಿ ಕಂಡುಬಂದ ಅಪರೂಪದ ಪ್ರಕರಣ ಇದಾಗಿದೆ.

    ಫತೇಹಬಾದ್​ನ ನಾಧೋಡಿ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಹಮ್ಮಿಕೊಳ್ಳಲಾಗಿತ್ತು. ಒಟ್ಟು 5085 ಮತದಾರರಲ್ಲಿ 4416 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಸುರೇಂದರ್​​ ಅವರು 2200 ಮತಗಳನ್ನು ಪಡೆದರೆ, ನರೇಂದರ್​ ಎಂಬುವರು 2201 ಮತಗಳನ್ನು ಪಡೆಯುವ ಮೂಲಕ ಕೇವಲ ಒಂದು ಮತಗಳಲ್ಲಿ ಜಯ ದಾಖಲಿಸಿದರು.

    ಕೇವಲ ಒಂದು ಮತದಿಂದ ಸೋತ ನೋವಿನಿಂದ ಸುರೇಂದರ್​​ ಅವರನ್ನು ಹೊರತರಲು ನಿರ್ಧರಿಸಿದ ಗ್ರಾಮಸ್ಥರು ಅವರಿಗೆ ಉಡುಗೊರೆ ನೀಡಲು ಮುಂದಾದರು. ಗ್ರಾಮದ ಎಲ್ಲ ಜನರು ಸೇರಿ 11,11,000 ರೂ. ನಗದು, ಸ್ವಿಪ್ಟ್​ ಝಿರೆ ಕಾರು ಮತ್ತು ಅರ್ಧ ಎಕರೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೇಲಾಗಿ ಐದು ವರ್ಷಗಳ ನಂತರ ನಡೆಯಲಿರುವ ಪಂಚಾಯಿತಿ ಚುನಾವಣೆಯಲ್ಲಿ ಸುರೇಂದರ್ ಪಂಚಾಯಿತಿಯ ಅಧ್ಯಕ್ಷರಾಗಿ ಆಗಿ ಆಯ್ಕೆಯಾಗಲಿದ್ದಾರೆ ಎಂದು ಘೋಷಿಸಲಾಗಿದೆ. ಗ್ರಾಮಸ್ಥರಿಂದ ಸಿಕ್ಕ ಗೌರವಕ್ಕೆ ಸುರೇಂದರ್​ ಸಂತಸ ವ್ಯಕ್ತಪಡಿಸಿದ್ದಾರೆ. ಹಳ್ಳಿ ಜನರ ಪ್ರೀತಿ ಗಳಿಸಿದ್ದು ಅವರ ದೊಡ್ಡ ಸಾಧನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸಾಮಾನ್ಯವಾಗಿ ಪಂಚಾಯತಿ ಚುನಾವಣೆ ಎಂದರೆ ಜಗಳ, ಘರ್ಷಣೆ ಹೊಡೆದಾಟಗಳು ನಡೆದು ಗ್ರಾಮಗಳಲ್ಲಿ ಬಣಗಳಾಗಿ ಹಂಚಿ ಹೋಗುತ್ತದೆ. ಹೀಗೆ ಸೋದರಭಾವದಿಂದ ಎಲ್ಲರೂ ಒಗ್ಗೂಡಿ ಪರಾಜಿತ ಅಭ್ಯರ್ಥಿಯನ್ನು ಸನ್ಮಾನಿಸಿ ಅಭಿನಂದಿಸುವುದು ವಿರಾಳಾತಿ ವಿರಳ. ಅಲ್ಲದೆ, ಫರಿದಾಬಾದ್ ಜಿಲ್ಲೆಯ ಫತೇಪುರ್ ತಾಗಾ ಗ್ರಾಮದ ನೂತನ ಪಂಚಾಯತ್​ ಸದಸ್ಯನನ್ನೂ ಸಹ ಸ್ಥಳೀಯರು ಸನ್ಮಾನಿಸಿದರು. (ಏಜೆನ್ಸೀಸ್​)

    ಕೋಳಿಯ ವಿರುದ್ಧ ದೂರು ದಾಖಲಿಸಿ ಡಾಕ್ಟರ್ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ ನೋಡಿ…​

    ವೃದ್ಧನ ಮನೆಯನ್ನು ಹೊತ್ತು ಸಾಗಿದ ಗ್ರಾಮಸ್ಥರು! ಕಾರಣ ತಿಳಿದರೆ ಕಣ್ತುಂಬಿ ಬರುತ್ತದೆ

    ಕ್ಯಾಮೆರಾ ಮುಂದೆ ಬೆತ್ತಲಾದ ಮಾಡೆಲ್​-ನಟಿ ರಾವಿಶ್ರೀ! ವೈರಲ್​ ಆಯ್ತು ಉಪನ್ಯಾಸಕಿಯ ಹಾಟ್​ ಅವತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts