More

    700 ಕೆಜಿ ತೂಕದ ತೊರಕೆ ಮೀನು ಬಲೆಗೆ : ಜಾಲತಾಣದಲ್ಲಿ ಕಾರ್ಯಾಚರಣೆ ವಿಡಿಯೋ ವೈರಲ್

    ಉಡುಪಿ: ಮೀನುಗಾರರ ಬಲೆಗೆ ಬಿದ್ದಿದ್ದ ಸುಮಾರು 700 ಕೆಜಿ ಹಾಗೂ 250 ಕೆ.ಜಿ. ತೂಕದ ಎರಡು ಕೊಂಬಿನ ತೊರಕೆ ಮೀನುಗಳನ್ನು ಮಲ್ಪೆ ಬಂದರಿನಲ್ಲಿ ಬುಧವಾರ ಕ್ರೇನ್ ಮೂಲಕ ಬೋಟ್‌ನಿಂದ ಕೆಳಗೆ ಇಳಿಸಲಾಗಿದ್ದು, ಈ ಕಾರ್ಯಾಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೃಹತ್ ಗಾತ್ರದ ಮೀನುಗಳನ್ನು ನೋಡಲು ನೂರಾರು ಜನ ಸೇರಿದ್ದರು.

    ಮಲ್ಪೆ ಸುಭಾಸ್ ಸಾಲಿಯಾನ್ ಅವರ ನಾಗಸಿದ್ಧಿ ಬೋಟ್‌ನ ಬಲೆಗೆ ಈ ಮೀನುಗಳು ಬಿದ್ದಿವೆ. ಸ್ಥಳೀಯರು ಇದನ್ನು ಎರಡು ಕೊಂಬು ತೊರಕೆ ಮೀನು ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಸ್ಟಿಂಗ್ ರೇ ಎಂದು ಕರೆಯಲಾಗುತ್ತದೆ. ಈ ಹಿಂದೆ ಇದಕ್ಕಿಂತ ದೊಡ್ಡ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿದ್ದ ಉದಾಹರಣೆ ಇದ್ದರೂ, ಈ ವರ್ಷದ ಮೀನುಗಾರಿಕಾ ಋತುವಿನಲ್ಲಿ ಮೊದಲ ಬಾರಿ ಅತೀ ದೊಡ್ಡ ಮೀನು ದೊರೆತಿದೆ. ಸದ್ಯ ಉತ್ತಮ ಬೆಲೆಗೆ ಮೀನು ಮಾರಾಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts